ಅಂಕೋಲಾ: : ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೋರ್ವ ಆಕಸ್ಮಿಕವಾಗಿ ಸಮುದ್ರ ನೀರು ಪಾಲಾಗಿದ್ದು,ಶವವಾಗಿ ಪತ್ತೆಯಾದ ಘಟನೆ ತಾಲೂಕಿನ.ಗಾಬಿತ ಕೇಣಿಯಲ್ಲಿ ಸಂಭವಿಸಿದೆ. ಬಾಬು (ಭಾಸ್ಕರ ) ತುಕಾರಾಮ ಅಂಕೋಲೆಕರ (48),ಮೃತ ದುರ್ದೈವಿಯಾಗಿದ್ದಾನೆ.
ಈತನು ಮಾಂಗಟೇಶ್ವರ ಗುಡ್ಡದ ಪಕ್ಕದ ಕಲ್ಲು ಬಂಡೆ ಬಳಿ ಗಾಳ ಹಾಕಿ ಮೀನುಗಾರಿಕೆಗೆ ನಡೆಸುತ್ತಿದ್ದಾಗ, ರಭಸವಾಗಿ ಬಂದ ಸಮುದ್ರ ಅಲೆಗಳ ಹೊಡೆತದಿಂದ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದ ಎನ್ನಲಾಗಿದೆ.
ನಂತರ ಇದು ಸ್ಥಳೀಯರ ಗಮನಕ್ಕೆ ಬಂದಿದೆ. ವಿಷಯ ತಿಳಿದ ಬೆಲೇಕೇರಿ ಕರಾವಳಿ ಕಾವಲು ಪಡೆ ಹವಾಲ್ದಾರ ಮೋಹನದಾಸ ಶೆಣ್ಣಿ, ಕೆ ಎನ್ ಡಿ ಸಿಬ್ಬಂದಿ (ಸ್ಥಳೀಯ ) ಮಂಜುನಾಥ ಮುಂಬೈಕರ, ಸ್ಥಳೀಯರಾದ ಬಾಳು ಕುರ್ಲೆ, ಶಂಕರ ಅಂಕೋಲೆಕರ ಇವರ ಸಹಕಾರ ಪಡೆದು ಬಾಬು ಅಂಕೋಲೆಕ ಇವರ ದೇಹವನ್ನು ನೀರಿನಿಂದ ಮೇಲೆತ್ತಿ ದಡಕ್ಕೆ ತಂದಿದ್ದಾರೆ. ಅಂಕೋಲಾ ಪಿ ಎ ಸೈ ಮಹಾಂತೇಶ ವಾಲ್ಮೀಕಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆಭೇಟಿ ನೀಡಿ ಪರಿಶೀಲಿಸಿದರು.
112 ತುರ್ತು ವಾಹನ ಸಿಬ್ಬಂದಿಗಳು ಹಾಜರಿದ್ದರು. ಗಾಭಿತಕೇಣಿಯ ಪ್ರಮುಖರಾದ ಗೋವಿಂದ ಧೂರಿ, ಸುಭಾಸ ಹಳನಕರ, ಶಿಲ್ಪಾ ಹಳ ನಕರ ,ಭಾಗ್ಯಶ್ರೀ ಅಂಕೋಲೆಕರ, ಸುದೇಶ ಕುರ್ಲೆ,ಹಾಗೂ ಮೃತನ ಕುಟುಂಬಸ್ಥರು ಮತ್ತು ಊರ ನಾಗರಿಕರಿದ್ದರು.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ವಾಯ ನಾಯ್ಕ, ಗಾಬಿತ ಕೇಣಿಯ ಮಂಜುನಾಥ ಹಳನಕರ, ಅಕ್ಷಯ ಅಂಕೋಲೆಕರ್, ಆರ್ ಪಿ ಅಂಕೋಲೆಕರ,ಪ್ರಕಾಶ್ ಕುರ್ಲೆ,ಮತ್ತಿತರರು ಸಹಕರಿಸಿದರು.
ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ