ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ: ಶಾರದಾ ಮೋಹನ ಶೆಟ್ಟಿ ಪಕ್ಷೇತರರಾಗಿ ಕಣಕ್ಕಿಳಿಯಲು ಸಿದ್ಧತೆ

ಕುಮಟಾ: ಭಾರೀ ಕುತೂಹಲ ಮೂಡಿಸಿದ್ದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಟಿಕೇಟ್ ಅನ್ನು ನಿವೇದಿತ್ ಆಳ್ವಾ ಅವರಿಗೆ ನೀಡಲಾಗಿದ್ದು, ಕುಮಟಾ ಕ್ಷೇತ್ರದ ಪ್ರಭಲ ಆಕಾಂಕ್ಷಿಯಾದ ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ ಅವರನ್ನು ಈ ಭಾರಿ ಪಕ್ಷ ಕೈಬಿಟ್ಟಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಪೂರ್ಣ ಪ್ರಮಾಣದ ಬೆಂಬಲದೊoದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಂತಿಸಿದ್ದು ಈ ಕುರಿತಾಗಿ ಮಾಹಿತಿ ನೀಡಲು ಇಂದು ಶಾರದಾ ಮೋಹನ ಶೆಟ್ಟಿ ಅವರ ನಿವಾಸದಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿ.ಎಲ್ ನಾಯ್ಕ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಹು ನಿರೀಕ್ಷೆ ಹೊಂದಿದ್ದ ಶಾರದ ಮೋಹನ ಶೆಟ್ಟಿ ಅವರನ್ನು ಇಂದು ಪಕ್ಷ ಕೈ ಬಿಟ್ಟಿದೆ. ಹೈಕಮಾಂಡ್‌ನ ಈ ಒಂದು ನಿರ್ಣಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಂತೆಯೇ ನಾನು ಸಹ ಪಕ್ಷದ ಮೇಲೆ ಬೇಸರಗೊಂಡು ಕುಮಟಾ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆನೆ. ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಬೆಲೆ ನೀಡದೇ ಇರುವುದು ದುರಾದೃಷ್ಟಕರ ಸಂಗತಿಯಾಗಿದ್ದು, ಪಕ್ಷಣ ಈ ನಿರ್ಣಯಕ್ಕೆ ನಮ್ಮ ವಿರೋದವಿದೆ ಎಂದರು.

ಈ ವೇಳೆ ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ತಾಯಿ ಮಕ್ಕಳ ಭಾಂದವ್ಯವನ್ನು ದೂರ ಮಾಡುವಂತಹ ಕೆಲಸವನ್ನು ಇಂದು ಮಾಡಿದೆ. ಮೋಹನ ಶೆಟ್ಟಿ ಅವರು ಅಂದಿನಿoದಲೂ ಕಾಂಗ್ರೆಸ್ ಪಕ್ಷವನ್ನು ನಮ್ಮ ಮಾತೃ ಪಕ್ಷ ಎಂದು ಹೇಳಿ ಪಕ್ಷವನ್ನು ಬೆಳಿಸಿಕೊಂಡು ಬಂದವರು. ಆದರೆ ಇಂದು ಅದೇ ಪಕ್ಷದಿಂದ ಅನ್ಯಾಯವಾಗಿದೆ. ಇದರಿಂದಾಗಿ ನಮ್ಮೆಲ್ಲಾ ಕಾರ್ಯಕರ್ತರು ಸಹ ಮನನೊಂದಿದ್ದಾರೆ. ಇನ್ನೂ ಮರ‍್ನಾಲ್ಕು ದಿನಗಳ ಕಾಲವಕಾಶ ಇದ್ದು ಅಷ್ಟರೋಳಗಾಗಿ ಕಾಂಗ್ರೆಸ್ ಪಕ್ಷವು ನನಗೆ ಒಂದು ಅವಕಾಶವನ್ನು ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಲೂ ಸಿದ್ಧನಿದ್ದೆನೆ. ಒಂದು ವೇಳೆ ಪಕ್ಷ ಅವಕಾಶ ನೀಡದೇ ಇದ್ದಲ್ಲಿ ಎಲ್ಲಾ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೆನೆ ಎಂದು ತಿಳಿಸಿದರು.

ಶಾರದಾ ಮೋಹನ ಶೆಟ್ಟಿ ಅವರು ಯಾವ ನಿರ್ಣಯ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಕಾರ್ಯಕರ್ತರು ಬದ್ಧರಾಗಿ ಅವರೊಂದಿಗೆ ನಿಲ್ಲುತ್ತೆವೆ ಎಂದು ಇದೇ ವೇಳೆ ಕಾರ್ಯಕರ್ತರು ತಿಳಿಸಿದರು. ಕಾಂಗ್ರೆಸ್ ಪಕ್ಷದ ಧೋರಣೆಗೆ ಮನನೊಂದ ಕಾರ್ಯಕರ್ತರುಗಳು ಪಕ್ಷದ ತಮ್ಮ ವಿವಿದ ಹುದ್ಧೆಗಳಿಗೆ ರಾಜಿನಾಮೆ ನೀಡಿರುವುದಾಗಿ ಇದೇ ವೇಳೆ ತಿಳಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Exit mobile version