Focus NewsImportant
Trending

ನಿವೃತ್ತ ಡಿ.ಎಫ್ ಓ ಮನೆಯಲ್ಲಿ ಕಳ್ಳತನ : ನಗದು ಹಾಗೂ ಬೆಳ್ಳಿ ಲೋಟ ಕಳುವು : ಮನೆ ಮುಂದೆ ನಿಲ್ಲಿಸಿಟ್ಟ ಪರಿಚಯಸ್ಥರ ಪಲ್ಸರ್ ಬೈಕನ್ನು ಕದ್ದೊಯ್ದ ಕಳ್ಳರು

ಅಂಕೋಲಾ: ನಿವೃತ್ತ ಡಿ ಎಫ್ ಓ ಓರ್ವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿದ ಕಳ್ಳರು ನಗದು ಹಣ,ಬೈಕ್ ಮೊದಲಾದ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ವಂದಿಗೆ ಗ್ರಾಮದ ಪ್ರವಾಸಿ ಮಂದಿರದ ಬಳಿ ರವಿವಾರ ರಾತ್ರಿ 8.30ರಿಂದ 10.30 ರ ನಡುವಿನ ಅವಧಿಯಲ್ಲಿ ನಡೆದಿದೆ.

ನಿವೃತ್ತ ಡಿ.ಎಫ್. ಓ ನರೇಂದ್ರ ಹಿತ್ತಲಮಕ್ಕಿ ಅವರ ಮನೆಗೆ ನುಗ್ಗಿದ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು ಒಳ ಪ್ರವೇಶ ಮಾಡಿ ಮೊದಲ ಮಹಡಿಯ ಮೇಲಿನ ಬಾಗಿಲ ಬೀಗ ಮುರಿದು ಬೆಡ್ ರೂಮಿನಲ್ಲಿದ್ದ ಎರಡು ಅಲ್ಮೇರಾ ಒಡೆದು 10 ಸಾವಿರ ರೂಪಾಯಿ ನಗದು, ಸುಮಾರು 3 ಸಾವಿರ ರೂಪಾಯಿ ಬೆಲೆಯ 50 ಗ್ರಾಂ ತೂಕದ ಬೆಳ್ಳಿ ಲೋಟ ಕಳ್ಳತನ ಮಾಡಿದ್ದು ಮನೆಯ ಎದುರು ನಿಲ್ಲಿಸಿಟ್ಟ ಪರಿಚಯಸ್ಥ ಪ್ರಮೀತ ನಾಯಕ ಅವರಿಗೆ ಸೇರಿದ್ದ 12 ಸಾವಿರ ಮೌಲ್ಯದ ಬಜಾಜ್ ಪಲ್ಸರ್ ಮೋಟಾರು ಬೈಕ್ ಕದ್ದು ಪರಾರಿಯಾಗಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button