ಮೇ 3 ರಂದು ಉತ್ತರಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ ಪ್ರಧಾನಿ: ಅಂಕೋಲಾ ಟೋಲ್ ಪ್ಲಾಜಾ ಸಮೀಪದ ಗೌರಿ ಕೆರೆಯ ಪ್ರದೇಶದಲ್ಲಿ ಅಂತಿಮಗೊoಡ ಜಾಗ

ಕುಮಟಾ: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿನ ಭಾರತೀಯ ಜನತಾ ಪಾರ್ಟಿಯ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತಗಾಗಿ ಮಾಹಿತಿ ನೀಡಲು ಇಂದು ಕುಮಟಾ ಪಟ್ಟಣದ ಬಿ.ಜೆ.ಪಿ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಸುದ್ಧಿಗೋಷ್ಠಿಯಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾಧ ವೆಂಕಟೇಶ ನಾಯ್ಕ ಅವರು ಮಾತನಾಡಿ, ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭ ಕ್ಷೇತ್ರದಲ್ಲಿ ಬಿ.ಜೆ.ಪಿಯ ಶಾಸಕರು ಅಧಿಕಾರದಲ್ಲಿದ್ದಾರೆ. ಹಳಿಯಾಳ ಒಂದು ಪ್ರದೇಶದಲ್ಲಿ ಮಾತ್ರ ನಮ್ಮ ಶಾಸಕರಿಲ್ಲವಾಗಿದೆ. ಚುನಾವಣಾ ಪ್ರಚಾರಾರ್ಥವಾಗಿ ಪಕ್ಷದ ಸಂಘಟನೆ ಕಳೆದ ಹಲವಾರು ದಿನಗಳಿಂದ ಮಂಡಲದ ಮಹಾಶಕ್ತಿ ಕೇಂದ್ರ ಮಟ್ಟದಲ್ಲಿ ಹಾಗೂ ಕಟ್ಟ ಕಡೆಯ ಭೂತ್ ಮತ್ತು ಪೇಜ್ ಪ್ರಮುಖರ ಸಮಘಟನೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದೆವೆ.

6 ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಒಂದು ಹಂತದ ಕರಪತ್ರ ವಿತರಣೆ ನಡೆದಿದೆ. ಎಲ್ಲಾ ಪ್ರದೇಶದಲ್ಲಿಯೂ ಅತ್ಯುತ್ತಮವಾದ ಸ್ಪಂದನೆ ಸಾರ್ವಜನಿಕರಿಂದ ದೊರೆಯುತ್ತಿದೆ. ವಿಶೇಷವಾಗಿ ಮೇ 3 ರಂದು ಉತ್ತರ ಕನ್ನಡ ಜಿಲ್ಲೆಗೆ ದೇಶಕಂಡ ಶ್ರೇಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿ ಯವರು ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಆಗಮಿಸಲಿದ್ದಾರೆ. ಅಂಕೋಲಾ ತಾಲೂಕಿನ ಟೋಲ್ ಪ್ಲಾಜಾ ಸಮೀಪದ ಗೌರಿ ಕೆರೆಯ ಪ್ರದೇಶದಲ್ಲಿ ಅತ್ಯಂತ ಭವ್ಯವಾದ ಹಾಗೂ ಬೃಹತ್ ವೇದಿಕೆಯ ಮೇಲೆ 6 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅಂದಿನ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ಮಾಹಿತಿ ನೀಡಿದರು. . ಜಿಲ್ಲಾ ಮಾಧ್ಯಮ ವಕ್ತಾರರಾದ ನಾಗರಾಜ ನಾಯಕ ಅವರು ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಬಿ.ಜೆ.ಪಿ ವಿರುದ್ಧ ನೀಡಿರುವ ಹೇಳಿಕೆ ಹಾಗೂ ಕಾಂಗ್ರೆಸ್ ಪಕ್ಷವು ಬೆ.ಜೆ.ಪಿ ಪ್ರಮುಖರ ಮೇಲೆ ನಡೆಸುತ್ತಿರುವ ಅಪ್ರಚೋದಿತ ದೈಹಿಕ ದಾಳಿಯನ್ನು ಬಿ.ಜೆ.ಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕಾoಗ್ರೆಸ್ ಪಕ್ಷದಲ್ಲಿ ಅನೇಕ ಆಕಾಂಕ್ಷಿಗಳು ಇದ್ದ ಸಂದರ್ಭದಲ್ಲಿಯೂ ದೂರದ ದಕ್ಷಿಣ ಕನ್ನಡದ ಅಭ್ಯರ್ಥಿಯಾದ ನಿವೇದಿತ್ ಆಳ್ವಾ ಅವರನ್ನು ಈ ಕ್ಷೇತ್ರಕ್ಕೆ ಹೇರಿದ್ದಾರೆ. ನಮ್ಮ ಪಕ್ಷವು ಆತ್ಮ ನಿರ್ಭರತೆಯತ್ತ ಹೆಜ್ಜೆ ಇಟ್ಟರೆ ಕಾಂಗ್ರೆಸ್ ಪಕ್ಷ ಇನ್ನೂ ಸಹ ಚೈನಾ ಸಾಮಾನು ಖರೀದಿಯಲ್ಲಿಯೇ ಉಳಿದುಕೊಂಡಿದೆ ಎಂಬುದಕ್ಕೆ ಇದು ಸಹ ಒಂದು ಉದಾಹರಣೆ. ದಿನಕರ ಶೆಟ್ಟಿ ಅವರು ಈ ಮಣ್ಣಿನ ಮಗನಾಗಿದ್ದು ಇಲ್ಲಿನ ಆಹು ಗೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಆದರೆ ನಿವೇದಿತ್ ಆಳ್ವಾ ಅವರಿಗೆ ಇಲ್ಲಿನ ಸಮಸ್ಯೆಗಳ ಕುರಿತು ಸ್ಪಷ್ಟತೆ ಇಲ್ಲ ಎಂದು ಇದೇ ವೇಳೆ ನಾಗರಾಜ ನಾಯಕ ಅವರು ಟೀಕಿಸಿದರು.

ಸುದ್ಧಿಗೋಷ್ಠಿಯಲ್ಲಿ ಬಿ.ಜೆ.ಪಿ ಪಕ್ಷದ ಪ್ರಮುಖ ನಾಯಕರಾದ ಶಶಿಭೂಷಣ ಹೆಗಡೆ, ಜಿಲ್ಲಾಕಾರ್ಯದರ್ಶಿ ಪ್ರಶಾಂತ ನಾಯ್ಕ, ಪ್ರಮುಖರಾದ ಎಮ್.ಜಿ ಭಟ್, ಹೇಮಂತ ಗಾಮವಕರ್, ಕುಮಾರ್ ಮಾರ್ಕಂಡೆ, ಆನಂದ ನಾಯಕ ಎಮ್.ಎಮ್ ಹೆಗಡೆ ಮುಂತಾದವರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Exit mobile version