ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಚಿತ್ರಣ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದೆ. ಪ್ರಾರಂಭದಲ್ಲಿ ಟಿಕೆಟ್ ಪೈಪೋಟಿಯಿಂದ ರಾಜ್ಯಾಧ್ಯ0ತ ಸುದ್ದಿಯಾಗಿತ್ತು. ಟಿಕೆಟ್ ಅಂತಿಮಗೊoಡ ಮೇಲೆ ಪಕ್ಷದ ಹುದ್ದೆಗೆ ರಾಜೀನಾಮೆ, ಬಂಡಾಯ ಅಂತ ವದಂತಿ ಹಬ್ಬಿ, ಇದೀಗ ರಾಜಕೀಯ ನಿವೃತ್ತಿ, ಪಕ್ಷಾಂತರದ ಸುದ್ದಿಗೆ ರೆಕ್ಕೆ ಪುಕ್ಕ ಹಚ್ಚಿ ಅಂಗಡಿ ಕಟ್ಟೆಯಿಂದ, ರಾಜಕೀಯ ಪಡಸಾಲೆಯಲ್ಲಿಯು ಅಂತೆ ಕಂತೆಯ ಚರ್ಚೆಗೆ ವೇಗ ಹಚ್ಚಲಾಗುತ್ತಿದೆ.
ಕುಮಟಾ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ಶಾರದಾ ಶೆಟ್ಟಿಯವರು ನಿಂತಿದ್ದರು. ಅವರಿಗೆ ಟಿಕೆಟ್ ವಂಚಿತರಾಗಿ, ಪಕ್ಷದ ವಿರುದ್ದ ಬಂಡಾಯ ಎದ್ದಿರುವ ಶಿವಾನಂದ ಹೆಗಡೆ ಕಡತೋಕ ಬೆಂಬಲ ನೀಡುವ ಬಗ್ಗೆ ಘೋಷಣೆ ಕೂಡ ಮಾಡಿದ್ದರು. ಸೋಮವಾರ ಶಾರದಾ ಶೆಟ್ಟಿಯವರು ನಾಮಪತ್ರ ವಾಪಾಸ್ ಪಡೆದು, ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಚಿತ್ರಣ ಬದಲಾಗಿದೆ. ಶಾರದಾ ಶೆಟ್ಟಿ ಅವರ ಬೆಂಬಲಿಗರಿಗೆ ನಿಮಗೆ ಅನುಕೂಲ ಆಗುವ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದಾರೆ. ಇದೀಗ ಅವರಿಗೆ ಬೆಂಬಲ ನೀಡಿದ ಶಿವಾನಂದ ಹೆಗಡೆಯವರ ನಿಲುವು ಯಾರಿಗೆ ಎನ್ನುವ ಯಕ್ಷ ಪ್ರಶ್ನೆ ಕ್ಷೇತ್ರದಲ್ಲಿ ಹುಟ್ಟಿಕೊಂಡಿದೆ.
ಕುಮಟಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪೈಪೋಟಿಯಲ್ಲಿ ಅಗ್ರ ಪಂತಿಯಲ್ಲಿರುವವರಲ್ಲಿ ಶಿವಾನಂದ ಹೆಗಡೆ ಕೂಡ ಒಬ್ಬರಾಗಿದ್ದರು. ಕಳೆದ ಐದು ವರ್ಷದಿಂದ ಸಂಘಟನೆ ಮಾಡಿ ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಕಟ್ಟಿದ್ದರು. ಕ್ಷೇತ್ರದಲ್ಲಿ ಅವರಿದೆ ಆದ ಹಿಡಿತ ಇಟ್ಟುಕೊಂಡಿದ್ದಾರೆ. ಅಭಿಮಾನಿಗಳು, ವಯಕ್ತಿಕ ಕಾರ್ಯಕರ್ತರು, ಸಮುದಾಯದ ಇವರ ಜೊತೆಯಲ್ಲಿದೆ. ಕ್ಷೇತ್ರದ ಮಟ್ಟಿಗೆ ಇವರ ಬೆಂಬಲ ಪಡೆದವರು ಜಯಗಳಿಸುವ ಮಟ್ಟಿಗೆ ವಾತಾವರಣ ಇದ್ದ ಬಗ್ಗೆ ವರ್ತಮಾನ ಕೇಳಿ ಬರುತ್ತಿದೆ.
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ದಿನದಿಂದ ಬೇರೆ ಬೇರೆ ಪಕ್ಷದವರು ಅವರ ಬೆಂಬಲ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಕೂಡ ಬೆಂಬಲ ಕೇಳಿರುವ ಬಗ್ಗೆ ಸುದ್ದಿಯಿದೆ. ಅವರೇ ನೇರ ಕೇಳಿದ್ದಾರ, ಪಕ್ಷದ ರಾಜ್ಯ ಮಟ್ಟದ ಮುಖಂಡರು ಸಂಪರ್ಕ ಮಾಡಿದ್ದಾರಾ ತಿಳಿದು ಬಂದಿಲ್ಲ. ಇನ್ನೂ ಬಿಜೆಪಿಯಿಂದ ಬಲವಾದ ಒತ್ತಡ ಬರುತ್ತಿದ ಬಗ್ಗೆ ಕೇಳಿ ಎಂದು ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಪ್ರಮುಖರನ್ನ, ಹೆಗಡೆಯವರ ಕೆಲವು ವಯಕ್ತಿಕ ಒಡನಾಡಿಗಳನ್ನ ಮಾತನಾಡಿಸಿದಾಗ ಅವರು ಬಿಜೆಪಿಗೆ ಹೋಗುವ ಸಾಧ್ಯತೆಯಿದೆ. ಬಿಜೆಪಿಯಿಂದ ಆಹ್ವಾನ ಈಗಾಗಲೇ ಅವರಿಗೆ ಹೋಗಿದೆ ಎನ್ನುತ್ತಾರೆ.
ಶಿವಾನಂದ ಹೆಗಡೆ ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಹಲವು ಪ್ರಮುಖರು ಈಗಾಗಲೇ ಸಂಪರ್ಕ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಹೈಕಮಾಂಡ್ ಮಟ್ಟದ ನಾಯಕ, ಸಂಸದ ಪ್ರಲ್ಲಾದ ಜ್ಯೋಷಿ ಯವರು ಮಾತುಕತೆ ನಡೆಸಿದ್ದಾರೆ. ಅದು ಫಲಪ್ರದ ಆಗಿದೆ ಎನ್ನುವುದರ ಬಗ್ಗೆ ಕೆಲವೊಂದು ಉಹಾ ಫೋಹ ಹುಟ್ಟಿಕೊಂಡಿದೆ. ಇದು ನಿಜವಾ ಸುಳ್ಳ ಅನ್ನುವುದು ಸ್ಪಷ್ಟತೆ ಇಲ್ಲವಾಗಿದೆ.
ಕುಮಟಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ತಮ್ಮ ಪಕ್ಷದ ಮುಕಂಡರಾದ ಗಜಾನನ ಪೈ ಅವರ ಜೋತೆಗೆ ಶಿವಾನಂದ ಹಗಡೆಯವರ ಬೇಟಿನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಸ ಗ್ತಾಹವಾಗಿದೆ.ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನುವುದು ಬಗ್ಗೆಯು ಚರ್ಚೆ ನಡೆಯುತ್ತಿದೆ.
ವಿಸ್ಮಯ ನ್ಯೂಸ್ ಶ್ರೀದರ್ ನಾಯ್ಕ ಹೊನ್ನಾವರ