Follow Us On

WhatsApp Group
Important
Trending

ಕುಮಟಾದಲ್ಲಿ 21 ಕೇಸ್ ದೃಢ

ಕಾಗಲ್, ಗೋಕರ್ಣ, ಅರಮನೆಕೋಪ್ಪ , ಹೊಂಡದಕ್ಕಲ್, ಬೆಟ್ಗೆರಿ, ಗುಡಬಳ್ಳಿ, ಹಿರೇಗುತ್ತಿ, ತೊರ್ಕೆ, ಮೂರುಕಟ್ಟೆ ಸಮೀಪ, ಉಪ್ಪಿನಪಟ್ಟಣ ಮುಂತಾದ ಕಡೆ ಸೋಂಕು ಪತ್ತೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 21 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಕಾಗಲ್‌ನಲ್ಲಿ 5, ಗೋಕರ್ಣ 4, ಅರಮನೆಕೋಪ್ಪ 3, ಹೊಂಡದಕ್ಕಲ್ 2 ಸೇರಿದಂತೆ, ಬೆಟ್ಗೆರಿ, ಗುಡಬಳ್ಳಿ, ಹಿರೇಗುತ್ತಿ, ತೋರ್ಕೆ, ಮೂರುಕಟ್ಟೆ ಸಮೀಪ, ಉಪ್ಪಿನ ಪಟ್ಟಣ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.

ಕಾಗಲ್‌ನ 71 ವರ್ಷದ ವೃದ್ಧೆ, ಕಾಗಲ್‌ನ 45 ವರ್ಷದ ಪುರುಷ, 17 ವರ್ಷದ ಯುವತಿ, 9 ವರ್ಷದ ಬಾಲಕಿ, 28 ವರ್ಷದ ಯುವತಿ, ಅರಮನೆಕೋಪ್ಪದ 2 ವರ್ಷದ ಮಗು, 70 ವರ್ಷದ ವೃದ್ಧೆ, 20 ವರ್ಷದ ಯವತಿಗೆ ಸೋಂಕು ದೃಢಪಟ್ಟಿದೆ.©Copyright reserved by Vismaya tv

ಹೊಂಡದಕ್ಕಲಿನ 33 ವರ್ಷದ ಮಹಿಳೆ, 7 ವರ್ಷದ ಬಾಲಕಿ, ಬೆಟ್ಗೆರಿಯ 18 ವರ್ಷದ ಯುವಕ, ಉಪ್ಪಿನ ಪಟ್ಟಣದ 28 ವರ್ಷದ ಮಹಿಳೆ, ಗುಡಬಳ್ಳಿಯ 84 ವರ್ಷದ ವೃದ್ಧ, ಮೂರುಕಟ್ಟೆ ಸಮೀಪದ 64 ವರ್ಷದ ಪುರುಷ, ತೋರ್ಕೆಯ 47 ವರ್ಷದ ಪುರುಷ, ಮುಸುಗುಪ್ಪಾದ 65 ವರ್ಷದ ಮಹಿಳೆಗೂ ಪಾಸಿಟಿವ್ ಬಂದಿದೆ.©Copyright reserved by Vismaya tv

ಗೋಕರ್ಣದ 39 ವರ್ಷದ ಪುರುಷ, 80 ವರ್ಷದ ವೃದ್ಧೆ, 67 ವರ್ಷದ ವೃದ್ಧ, 28 ವರ್ಷದ ಯುವತಿ, ಹಿರೇಗುತ್ತಿಯ 65 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇಂದು 21 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1010 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು

Back to top button