Follow Us On

Google News
Info
Trending

ಅಂಕೋಲಾದಲ್ಲಿಂದು 07 ಕೇಸ್ : ಗುಣಮುಖ 11 : ಸಕ್ರಿಯ 86

  • ಪ್ರಕೃತಿಗೆ ಸವಾಲು : ಔಷಧ ತಯಾರಿಕ ಘಟಕದ ಸಿಬ್ಬಂದಿಗಳಿಗೆ ಸೋಂಕು ?
  • 60 ಜನರ ಗಂಟಲು ದ್ರವ ಪರೀಕ್ಷೆ : ಪ್ರತಿ ದಿನ 300 ಪರೀಕ್ಷೆ ನಡೆಸುವಂತೆ ಎಸಿ ಸಭೆಯಲ್ಲಿ ಸೂಚನೆ

ಅಂಕೋಲಾ : ತಾಲೂಕಾ ವ್ಯಾಪ್ತಿಯ ನವಗದ್ದೆ, ಅಂಬಾರಕೊಡ್ಲ, ಬಾಳೆಗುಳಿ, ಬಳಲೆ, ಮಠಾಕೇರಿಗಳಲ್ಲಿ ಶುಕ್ರವಾರ ಒಟ್ಟೂ 07 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಸೋಂಕು ಮುಕ್ತರಾದ 11 ಜನ ರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 53 ಮಂದಿ ಸಹಿತ ಒಟ್ಟೂ 86 ಪ್ರಕರಣಗಳು ಸಕ್ರಿಯವಾಗಿದೆ.

ಪ್ರಕೃತಿಗೆ ಸವಾಲು ? ತಾಲೂಕಿನ ಹೆಸರಾಂತ ಔಷಧ ತಯಾರಿಕ ಘಟಕದ ಸಿಬ್ಬಂದಿಗಳಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ ಎನ್ನಲಾಗಿದ್ದು, ಒಂದರ್ಥದಲ್ಲಿ ಪ್ರಕೃತಿಗೆ ಸವಾಲೆಸೆದಂತಾಗಿದೆ.

ಮಾಸ್ಕಧರಿಸದವರಿಗೆ ದಂಡದ ಬಿಸಿ :

ಪಟ್ಟಣ ವ್ಯಾಪ್ತಿಯಲ್ಲಿ ಮಾಸ್ಕ ಧರಿಸದೇ ಸಂಚರಿಸುವವರ ವಿರುದ್ದ ದಂಡ ಪ್ರಯೋಗಕ್ಕೆ ಮುಂದಾಗಿರುವ ಪುರಸಭೆ, ಇಂದು ಒಟ್ಟೂ 46 ಜನರಿಂದ ತಲಾ 200 ರೂ. ನಂತೆ ಒಟ್ಟೂ 9,200 ರೂ. ದಂಡ ವಸೂಲಿ ಮಾಡಿದೆ. ಈ ವೇಳೆ ಓರ್ವ ವ್ಯಕ್ತಿಯು ಪುರಸಭೆ ಅಧಿಕಾರಿಗಳ ಜೊತೆ ವಾಗ್ವದಕ್ಕೆ ಇಳಿದ ಘಟನೆಯೂ ನಡೆದಿದೆ ಎನ್ನಲಾಗಿದೆ.

ಇತ್ತೀಚಿಗೆ ಪುರಸಭೆಯ ಕೆಲ ಸಿಬ್ಬಂದಿಗಳೇ ಮಾಸ್ಕ ಧರಿಸದಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಒಟ್ಟಾರೆಯಾಗಿ ಸಾರ್ವಜನಿಕರು ಮತ್ತು ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಕೊವಿಡ್ ಮುಂಜಾಗೃತೆ ತೆಗೆದುಕೊಳ್ಳ ಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಗಂಟುಲು ದ್ರವ ಪರೀಕ್ಷೆ :

ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟೂ 60 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಕುಮಟಾ ಉಪವಿಭಾಗಾಧಿಕಾರಿ ಅಜಿತ ಎಂ. ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಾರ್ಯಾಲಯದಲ್ಲಿ ವಿವಿಧ ಅಧಿಕಾರಿಗಳ ಸಭೆ ನಡೆಸಿದರು.

ಕೊರೊನಾ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತಲ್ಲದೇ, ಸಮುದಾಯದಲ್ಲಿ ಸೋಂಕು ಹರಡಿರು ವುದನ್ನು ಪತ್ತೆ ಹಚ್ಚುವುದು, ದಮ್ಮು ಮತ್ತಿತರ ಕಾಯಿಲೆಗೆ ಒಳಗಾಗಿರುವರು, ವೃದ್ಧರ, ಗಂಟಲು ದ್ರವ ಪರೀಕ್ಷಿಸಿ ವಿಶೇಷ ಆರೋಗ್ಯ ಕಾಳಜಿ ತೆಗೆದುಕೊಳ್ಳಲು ಪ್ರತಿದಿನ ತಾಲೂಕಿನಿಂದ ಕನಿಷ್ಟ 300 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲು ಸೂಚಿಸಲಾಯಿತು.

ಸಭೆಯಲ್ಲಿ ತಹಶೀಲ್ದಾರ ಉದಯ ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್, ತಾಲೂಕ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ, ಆಡಳಿತ ವೈದ್ಯಾಧಿಕಾರಿ ಡಾ. ಮಹೇಂದ್ರ ನಾಯಕ, ಪಿಎಸ್‍ಐ ಈ.ಸಿ.ಸಂಪತ್, ಬಿಇಓ ಶ್ಯಾಮಲಾ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button