Uttara Kannada
Trending

ಓರ್ವನ ಬಂಧನ: 2.6 ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ

ಮುಂಡಗೋಡ: ತಾಲೂಕಿನ ವಿವಿಧ ಕಡೆಗಳಲ್ಲಿ ಕೆಲವು ದಿನಗಳ ಹಿಂದೆ ನಡೆದ ಗಂಧದ ಮರ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಶಿಗ್ಗಾವಿ ತಾಲೂಕಿನ ಹೊಸೂರ ಗ್ರಾಮದ ಅರುಣಕುಮಾರ ಸುಣಗಾರಎಂಬಾತನನ್ನು ಇಲ್ಲಿನ ಅರಣ್ಯ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಭೀಮಣ್ಣ ಸುಣಗಾರ ನಾಪತ್ತೆಯಾಗಿದ್ದಾನೆ.

ಬಂಧಿತನಿoದ ಒಟ್ಟು 2.5ಲಕ್ಷ ಮೌಲ್ಯದ 26 ಕೆಜಿ ತೂಕದ ಶ್ರೀಗಂಧ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ತಂಡವನ್ನು ರಚಿಸಿ ತಂತ್ರಜ್ಞಾನದ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Related Articles

Back to top button