ಜಿಲ್ಲೆಯಲ್ಲಿಂದು 57 ಕರೊನಾ ಪಾಸಿಟಿವ್

[sliders_pack id=”1487″]

ಕಾರವಾರದಲ್ಲಿ 21 ಕೇಸ್ ದಾಖಲು
ಮುಂಡಗೋಡದಲ್ಲಿ 10 ಪ್ರಕರಣ ದಾಖಲು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಳವಾರ 57 ಕರೊನಾ ಪ್ರಕರಣ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರದಲ್ಲಿ ಅತಿಹೆಚ್ಚು ಅಂದರೆ 21 ಕೇಸ್ ದೃಢಪಟ್ಟಿದೆ. ಉಳಿದಂತೆ ಮುಂಡಗೋಡದಲ್ಲಿ 10, ಹಳಿಯಾಳದಲ್ಲಿ 9 ಕೇಸ್ ಕಾಣಿಸಿಕೊಂಡಿದೆ. ಕುಮಟಾದಲ್ಲಿ 3 , ಭಟ್ಕಳ, ಯಲ್ಲಾಪುರದಲ್ಲಿ ತಲಾ ನಾಲ್ವರು, ಶಿರಸಿಯಲ್ಲಿ ಐವರು, ಹಾಗೂ ಜೊಯಿಡಾದ ಓರ್ವನಲ್ಲಿ ಸೋಂಕು ದೃಢಪಟ್ಟಿದೆ.

ಇಂದು 57 ಕರೊನಾ ಪ್ರಕರಣ ಪತ್ತೆಯಾದ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,284ಕ್ಕೆ ಏರಿಕೆಯಾಗಿದೆ. ಇದೇ ವೇಳೆ 1,554 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 78 ಸೋಂಕಿತರು ಹೋಮ್ ಐಸೋಲೆಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version