ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ರಿಪೇರಿಗೆ ಬಂದ ಮೊಬೈಲ್ ಅನ್ನೂ ಬಿಡಿದ ದುಷ್ಕರ್ಮಿಗಳು

ಅಂಕೋಲಾ: ತಾಲೂಕಿನ ಗ್ರಾಮೀಣ ಪ್ರದೇಶದ ಕಟ್ಟಡವೊಂದರ ಮೇಲ್ಮಹಡಿಯಲ್ಲಿದ್ದ ಅಂಗಡಿ ಒಂದಕ್ಕೆ ಒಳನುಗ್ಗಿದ ಕಳ್ಳರು, ಪೆನ್ ಡ್ರೈವ್, ನಗದು, ಮೊಬೈಲ್ ಸೆಟ್ ಗಳು , ಕ್ಯಾಮರಾ ಕದ್ದೊಯ್ದ ಘಟನೆ ನಡೆದಿದೆ. ತಾಲೂಕಿನ ಅಚವೆ ಚನಗಾರ ಬೊರಳ್ಳಿ ನಿವಾಸಿ ಗಣೇಶ ಮಾರುತಿ ನಾಯ್ಕ ಎನ್ನುವವರಿಗೆ ಸೇರಿದ್ದ ಮೊಬೈಲ್ ರಿಪೇರಿ ಅಂಗಡಿಗೆ ಮೇಲ್ಬಾಗದ ಹಲಗೆಯನ್ನು ಕಿತ್ತು ಒಳನುಗ್ಗಿದ ಕಳ್ಳರು ಸುಮಾರು 15 ಸಾವಿರ ರೂಪಾಯಿ ಮೌಲ್ಯದ 35 ಪೆನ್ ಡ್ರೈವ್ ಗಳು, 10 ಸಾವಿರ ರೂಪಾಯಿ ಮೌಲ್ಯದ ಕ್ಯಾಮೆರಾ, 15 ಸಾವಿರ ರೂಪಾಯಿ ಮೌಲ್ಯದ ರಿಪೇರಿಗೆ ಬಂದ 6 ಮೊಬೈಲ್ ಪೋನುಗಳು, 10 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಬಿಡಿ ಭಾಗಗಳು ಮತ್ತು 3850 ನಗದು ಸೇರಿದಂತೆ 50 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಕಳ್ಳತನದಲ್ಲಿ ಸ್ಥಳೀಯರ ಕೈವಾಡದ ಶಂಕೆಯೂ ಕೇಳಿಬಂದಿದ್ದು ಪೊಲೀಸ್ ತನಿಕೆಯಿಂದ ಸತ್ಯಾಂಶ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version