ಬೆನ್ನುನೋವಿಗಾಗಿ ಚುಚ್ಚುಮದ್ದು ಪಡೆದ ಕೆಲವೇ ಕ್ಷಣದಲ್ಲಿ ಮಹಿಳೆ ಸಾವು: ಮುಗಿಲುಮುಟ್ಟಿದ ಆಕ್ರಂದನ

ಕಾರವಾರ: ಇಲ್ಲಿನ ಹಳಗಾದ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರದಲ್ಲಿ ಪಾರ್ಶ್ವವಾಯು ಪೀಡಿತ ತಂದೆಗೆ ಚಿಕಿತ್ಸೆ ಕೊಡಿಸಲು ಬಂದ 32 ವರ್ಷದ ಮಹಿಳೆ ಚುಚ್ಚು ಮದ್ದು ಪಡೆದ ಕಲವೇ ಕ್ಷಣಗಳಲ್ಲಿ ಮೃತಟ್ಟಿದ್ದಾಳೆ. ಹೌದು, ಬೆನ್ನು ನೋವಿಗಾಗಿ ಚುಚ್ಚುಮದ್ದು ಪಡೆದ ಕೆಲವೇ ಸಮಯದಲ್ಲಿ ಸಾವನ್ನಪ್ಪಿದ್ದು, ಮೃತಳನ್ನು ಸ್ವಪ್ನ ರಾಯ್ಕರ್(32) ಎಂದು ಗುರುತಿಸಲಾಗಿದೆ. ಈಕೆ ತಮ್ಮ ತಂದೆ ಪ್ಯಾರಲಿಸೀಸ್ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರ ತಾಲೂಕಿನ ಹಳಗಾ ಗ್ರಾಮದ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಪ್ಯಾರಲಿಸೀಸ್ ಬರದಂತೆ ಮುಂಚೆಯೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದರು ಎನ್ನಲಾಗಿದೆ. ಇನ್ನು ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಂತೆ ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಈಕೆ ಚಾರ್ಟೆಡ್‌ ಅಕೌಂಟೆಂಟ್‌ ಎಂದು ತಿಳಿದುಬಂದಿದೆ.

Railway Recruitment 2023 : SSLC , ITI ಪಾಸಾದವರು ಅರ್ಜಿ ಸಲ್ಲಿಸಬಹುದು

ಮಹಿಳೆ ಕುಸಿದು ಬೀಳುತ್ತಿದ್ದಂತೆ ತಕ್ಷಣ ಆಸ್ಪತ್ರೆಯವರೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನು ಸೇರಿಸಿದ್ದಾರೆ. ಮೃತ ಸ್ವಪ್ನ , ಕುಟುಂಬದ ಜೊತೆ ಪ್ರವಾಸಕ್ಕಾಗಿ ಬಂದ ಮಹಿಳೆ. ಪ್ರವಾಸದ ಜೊತೆ ತಂದೆಗೆ ಚಿಕಿತ್ಸೆ ಕೊಡುತ್ತಿದ್ದ ಆಸ್ಪತ್ರೆಗೆ ಸಹ ಭೇಟಿ ನೀಡಿದ್ದಳು. ಪ್ಯಾರಲಿಸೀಸ್ ಹಿನ್ನಲೆಯಲ್ಲಿ ಮುಂಜಾಗೃತೆ ವಹಿಸಲು ತಾನು ಇಂಜೆಕ್ಷನ್ ತೆಗೆದುಕೊಳ್ಳಲು ಮುಂದಾಗಿದ್ದಳು. ಚೆನ್ನಾಗಿದ್ದ ಮಹಿಳೆ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದಂತೆ ಮೃತಪಟ್ಟಿದ್ದರಿಂದ ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳಿಗಿತ್ತು. ಮೃತಳಿಗೆ ಪುಟ್ಟ ಮಗುವಿದ್ದು ತಾಯಿಯ ಮುಖವನ್ನ ತೋರಿಸದೇ ತಂದೆ ಆಸ್ಪತ್ರೆ ಹೊರಗೆ ಪರದಾಟ ನಡೆಸುತ್ತಿದ್ದ ದೃಶ್ಯ ಎಲ್ಲರ ಮನಕಲುಕುವಂತಿತ್ತು.

ವಿಸ್ಮಯ ನ್ಯೂಸ್‌, ಕಾರವಾರ

Exit mobile version