ವಿಷಬೀಜ ಸೇವಿಸಿ 10ಕ್ಕೂ ಹೆಚ್ಚು ಶಾಲೆಯ ಮಕ್ಕಳು ಅಸ್ವಸ್ಥ

ಕಾರವಾರ: ಶಾಲೆಯ ಆವರಣದಲ್ಲೇ ಇದ್ದ ವಿಷಕಾರಿ ಬೀಜ ಸೇವಿಸಿ 10ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಹಳಿಯಾಳ ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ಶೇಂಗ ಬೀಜವೆಂದು ಶಾಲೆಯ ಆವರಣದಲ್ಲಿ ಬೆಳದಿದ್ದ ಕಾಡು ಗಿಡದ ಬೀಜ ತಿಂದ ಶಾಲೆಯ ಮಕ್ಕಳಿಗೆ ವಾಂತಿ ಬೇದಿ ಪ್ರಾರಂಭವಾಗಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಪೋಷಕರು ಕಾಳಗಿನಕೊಪ್ಪ ಗ್ರಾಮದ ಸರಕಾರಿ ಆಸ್ಪತ್ರೆ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದು , ಇದೀಗ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಕಮಿಟಿಯ ಸದಸ್ಯರು ಹಾಜರಿದ್ದರು.

ವಿಸ್ಮಯ ನ್ಯೂಸ್‌, ಕಾರವಾರ

Exit mobile version