ಭಟ್ಕಳ: ಭಟ್ಕಳದಲ್ಲಿ ಮಂಗಳವಾರದಂದು ಬೀದಿ ನಾಯಿಗಳು ಕಂಡ ಕಂಡ ಕಡೆಗಳಲ್ಲಿ ದಾರಿಹೋಕರ ಮೇಲೆ ದಾಳಿ ನಡೆಸಿದ್ದು, ಒಂದೇ ದಿನದಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ಮದೀನಾ ಕಾಲೋನಿಯಲ್ಲಿ ಹುಚ್ಚು ನಾಯಿಯೊಂದು ಐದು ಜನರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದ್ದು, ಇದು ಹುಚ್ಚು ನಾಯಿನೋ ಅಥವಾ ಬೀದಿ ನಾಯಿನೋ ಎಂಬುದರ ಕುರಿತು ಸರಿಯಾದ ಮಾಹಿತಿ ಲಭ್ಯವಿಲ್ಲ. ಅಲ್ಲದೆ ಹೆಬಳೆ ಪಂಚಾಯತ್ ವ್ಯಾಪ್ತಿಯ 2, ಹಡೀನ್ ನಲ್ಲಿ 1, ಸರ್ಪನಕಟ್ಟೆಯಲ್ಲಿ 1 ಹಾಗೂ ಬದ್ರಿಯಾ ಕಾಲೋನಿಯಲ್ಲಿ 1 ಮಂದಿಗೆ ನಾಯಿ ದಾಳಿ ಮಾಡಿದೆ.
Railway Recruitment 2023 : SSLC , ITI ಪಾಸಾದವರು ಅರ್ಜಿ ಸಲ್ಲಿಸಬಹುದು
ನಾಯಿ ದಾಳಿಗೆ ಒಳಗಾದವರನ್ನು ಜೀವನ್ ನಾಯ್ಕ, ಮುಹಮ್ಮದ್ ಇದ್ರೀಸ್, ಫಿರ್ದೊಸ್ ಬಾನು, ಮುಹಮ್ಮದ್ ಫಾರೂಖ್, ಫರಿದಾ ಬಾನು ಜಾಲಿ, ಕೌಸರ್ ಮದೀನಾ ಕಾಲೋನಿ, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಅನ್ಸಾರ್, ಅಂಜುಮ್ ಎಂದು ಗುರುತಿಸಲಾಗಿದೆ. ನಾಯಿ ದಾಳಿ ಸುದ್ದಿಗೆ ಭಟ್ಕಳದ ಜನರು ಭಯಬೀತರಾಗಿದ್ದು ಒಂದೇ ದಿನದಲ್ಲಿ ಹತ್ತಕ್ಕು ಹೆಚ್ಚು ಜನರ ಮೇಲೆ ನಾಯಿ ದಾಳಿ ನಡೆಸಿದ್ದು , ಇದು ಹುಚ್ಚು ನಾಯಿಗಳ ಹಾವಳಿ ಆಗಿರಬಹುದು ಎಂದು ಅನುಮಾನಿಸಲಾಗಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ