ಪೋಲಿಸ್ ಠಾಣೆಯಲ್ಲಿ ಆರೋಪಿ ವಿಷಸೇವಿಸಿ ಸಾವು ಪ್ರಕರಣ: ಸಿಪಿಐ, ಪಿಎಸ್‌ಸೈ ಸೇರಿ ಐವರು ಪೊಲೀಸರ ಅನಾಮತು
ಹೊನ್ನಾವರ: ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ವಿಚಾರಣೆ ಸಂದರ್ಭದಲ್ಲಿ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ವಿಷ ಸೇವಿಸಿ ಆರೋಪಿ ಮೃತಪಟಿದ್ದ. ಇದೀಗ ಪ್ರಕರಣಕ್ಕೆ ಸಂಬoಧಪಟ್ಟoತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಸಿಪಿಐ ಮಂಜುನಾಥ ಇ.ಓ, ಕೈಂ ಪಿಎಸೈ ಮಂಜೇಶ್ವರ ಚಂದಾವರ, ಸಿಬ್ಬಂದಿಗಳಾದ ಸಂತೋಷ, ರಮೇಶ ಲಂಬಾಣಿ, ಮಹಾವೀರ ಅಮಾನತು ಆದ ಸಿಬ್ಬಂದಿಗಳಾಗಿದ್ದಾರೆ.
KEA Recruitment 2023: ಭರ್ಜರಿ ಉದ್ಯೋಗಾವಕಾಶ: 670 ಹುದ್ದೆಗಳಿಗೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ
ಪಟ್ಟಣದ ಸಾಲೆಹಿತ್ತಲ್ ಮನೆ ಕಳ್ಳತನ ಪ್ರಕರಣಕ್ಕೆ ಸಂಭದಿಸಿದoತೆ ಬಿಹಾರ ಮೂಲದ ಇಬ್ಬರನ್ನು ವಿಚಾರಣೆಗೆ ಕರೆ ತರಲಾಗಿತ್ತು. ಬಂಧಿತರಲ್ಲಿ ಓರ್ವರಾದ ದಿಲೀಪ ಮಂಡೇಲ್ ವಿಚಾರಣೆ ವೇಳೆ ಚಿನ್ನಕ್ಕೆ ಹೊಳಪು ನೀಡುವ ಕಾರ್ಯ ತೋರಿಸುತ್ತಿರುವಾಗ ಸೆನೈಡ್ ಬಗೆಯ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಆರಂಭದಲ್ಲಿ ವಿಚಾರಣೆ ನಡೆಸಿ ನಂತರ ಮಂಗಳೂರು ವಲಯದ ಐ ಜಿ ಚಂದ್ರಗುಪ್ತ ಸುದೀರ್ಘ ಎರಡು ಗಂಟೆಯ ವಿಚಾರಣೆಯ ಬಳಿಕ ಈ ಆದೇಶ ಜಾರಿಯಾಗಿದೆ. ಮೃತದೇಹವನ್ನು ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ರವಿವಾರ ಮ್ಯಾಜಿಸ್ಟೇಟ್ ಸಮ್ಮುಖದಲ್ಲಿ, ಕುಟುಂಬದ ಅನುಮತಿ ಮೇರೆಗೆ ಮರಣೊತ್ತರ ಪರೀಕ್ಷೆ ನಡೆಯಲಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ