ಕಾರವಾರ: ಉತ್ತರಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಹೊನ್ನಾವರದ ಕೆಲ ಭಾಗದಲ್ಲಿ ಮರಬಿದ್ದು ವಿದ್ಯುತ್ ವ್ಯತ್ಯಯವಾಗಿದೆ. ಇನ್ನು ಕಾರವಾರದ ಅರಗಾದಲ್ಲಿ ವೃದ್ಧ ಮಹಿಳೆಯೊಬ್ಬಳು ಕಾಲುಜಾರಿಬಿದ್ದು ಮೃತಟ್ಟಿದ್ದಾಳೆ. ಮಹಿಳೆ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ತಾರಾಮತಿ ನಾಯ್ಕ ಮೃತ ಮಹಿಳೆ ಎಂದು ತಿಳಿದುಬಂದಿದೆ.
Job News: 4045 ಹುದ್ದೆಗಳಿಗೆ ನೇಮಕಾತಿ: ಪದವಿ ಪಡೆದವರು ಅರ್ಜಿ ಸಲ್ಲಿಸಿ
ಎರಡು ದಿನ ಮುನ್ನೆಚ್ಚರಿಕೆ
ಉತ್ತರಕನ್ನಡದಲ್ಲಿ ಎರಡು ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸುವಂತೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚನೆ ನೀಡಿದೆ. ಮೀನುಗಾರರು, ಪ್ರವಾಸಿಗರು ಸಮುದ್ರಕ್ಕೆ ಇಳಿಯಂದೆ ಸೂಚನೆ ನೀಡಲಾಗಿದೆ. ಸಂಬoಧಪಟ್ಟ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ಇರುವಂತೆ ಸೂಚನೆ ಬಂದಿದ್ದು, ಅಪಾಯದ ಸಂದರ್ಭದಲ್ಲಿ ಸಂಪರ್ಕಿಸಲು ದೂರವಾಣಿ ಕರೆಗಳನ್ನು ಬಿಡುಗಡೆಗೊಳಿಸಲಾಗಿದೆ.
ಭಟ್ಕಳದಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ
ಭಟ್ಕಳದಲ್ಲಿಯೂ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡು ರಸ್ತೆ ಮೇಲೆ ಸೇರಿದಂತೆ ಎಲ್ಲೆಡೆ ನೀರು ಹರಿದು ವಾಹನ ಸಂಚಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಭಾರಿ ಮಳೆಯಿಂದಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನ ಮನೆಗಳಿಂದ ಹೊರಗೆ ಬರದಂತಾಗಿತ್ತು. ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದವು. ಪಟ್ಟಣದ ಮುಖ್ಯ ಪೇಟೆ ರಸ್ತೆಗಳೆಲ್ಲಿ ನೀರು ತುಂಬಿತ್ತು. ಅಲ್ಲದೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಂಶುದ್ದೀನ್ ಸರ್ಕಲ್‌ನಲ್ಲಿ ನೀರು ನಿಂತು ಪರದಾಡುವಂತಾಯಿತು.
ರoಗಿನಕಟ್ಟೆಯಲ್ಲಿ ಅಡಿಗಳಷ್ಟು ನೀರು ರಸ್ತೆಯ ತುಂಬೆಲ್ಲ ನಿಂತ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನಗಳು ಸರದಿ ಸಾಲಿನಲ್ಲಿ ನಿಂತು ನಿಧಾನವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ದ್ರಶ್ಯ ಕಂಡು ಬಂತು. ಭಾರಿ ಗಾತ್ರದ ವಾಹನಕ್ಕಿಂತ ದ್ವಿಚಕ್ರ ವಾಹನ, ಆಟೋ ರಿಕ್ಷಾ ಹಾಗೂ ಕಾರುಗಳ ಓಡಾಟಕ್ಕೆ ಭಾರಿ ತೊಂದರೆ ಉಂಟಾಯಿತು. ರಘುನಾಥ ದೇವಸ್ಥಾನದ ಹತ್ತಿರ ಯುಜಿಡಿ ಅವೈಜ್ಞಾನಿಕ ಕಾಮಗಾರಿಯಿಂದ ದೊಡ್ಡಗಾತ್ರದ ಹೊಂಡಗಳು ಬಿದ್ದಿದ್ದು ಇದರಿಂದ ಸಾರ್ವಜನಿಕರು ತೀರಾ ತೊಂದರೆ ಅನುಭವಿಸಿದರು. ಅಂಗಡಿ ವ್ಯಾಪಾರಸ್ಥರಿಗೆ, ಹೊಟೇಲ್ ಮಾಲೀಕರಿಗೆ ದಿನವಿಡಿ ಸುರಿದ ಮಳೆ ವ್ಯಾಪಾರಕ್ಕೆ ಅಡ್ಡಿಯುಂಟು ಮಾಡಿದ್ದು, ಬೀದಿ ಬದಿ ವ್ಯಾಪಾರಿಗಳು ಮಳೆಯಲ್ಲಿಯೇ ವ್ಯಾಪಾರಕ್ಕೆ ಇಳಿದಿರುವುದು ಕಂಡು ಬಂತು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ