Focus News
Trending

ಪತಂಜಲಿ ಯೋಗ ಸಮಿತಿಯಿಂದ ಅಂಕೋಲಾದಲ್ಲಿ  ಗುರು ಪೂರ್ಣಿಮೆ ಆಚರಣೆ

ಅಂಕೋಲಾ : ಗುರು ಎಂದರೆ ಪೂರ್ಣತೆಯ ಸಂಕೇತ  ಬಾಲ್ಯದಲ್ಲಿ ತಂದೆ ತಾಯಿ ಸಂಸ್ಕಾರಗಳನ್ನು ನೀಡಿ ಗುರುಗಳಾದರೆ ಬೆಳೆಯುತ್ತಾ ಸುತ್ತಲಿನ ಪರಿಸರ ಹಾಗೂ ವಿದ್ಯ ಕಲಿಸಿದ ಶಿಕ್ಷಕರು ಗುರುಗಳಾಗುತ್ತಾರೆ ಜೀವನದಲ್ಲಿ ಶಿಕ್ಷಕವೃತ್ತಿಯಲ್ಲಿ ಸಿಗುವಂತಹ ಸಂತೃಪ್ತಿ ಯಾವ ಕ್ಷೇತ್ರದಲ್ಲಿಯೂ ಸಿಗಲು ಸಾದ್ಯವಿಲ್ಲ ವೇದವ್ಯಾಸ ಜಯಂತಿಯನ್ನು ಗುರುಪೂರ್ಣಿಮೆ ಎಂದು ಆಚರಿಸುತ್ತಿರುವುದು ಗುರು ಪರಂಪರೆಗೆ ನಾವೆಲ್ಲ ನೀಡುತ್ತಿರುವ ಅತ್ಯಂತ ದೊಡ್ಡ ಗೌರವವಾಗಿದೆ ಎಂದು ನಿವೃತ್ತ ಪ್ರಾಚಾರ್ಯರು ಯಕ್ಷಗಾನ ಕಲಾವಿದರು ಸಾಹಿತಿಗಳೂ ಆದ ರಾಮಕೃಷ್ಣ ಗುಂದಿ ಹೇಳಿದರು. 

ಅವರು  ಪತಂಜಲಿ ಯೋಗ ಸಮೀತಿ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ ವತಿಯಿಂದ ನಗರದ ಗಣಪತಿ ದೇವಸ್ಥಾನದ ಮೊದಲನೇ ಮಹಡಿಯಲ್ಲಿ ಗುರು ಪೂರ್ಣಿಮೆ ಕಾರ್ಯಕೃಮವನ್ನು ಉದ್ಘಾಟಿಸಿ ಮಾತನಾಡಿದರು.   ಅದ್ಯಕ್ಷತೆಯನ್ನುವಹಿಸಿ ಮಾತನಾಡಿದ  ಪಂಡಿತ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ ವಿಜಯ ದೀಪ  ಗುರು ಹಾಗೂ ಗುರಿ ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾದಿಸಬಹುದು  ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ  ಯೋಗ ಹಾಗೂ ಪ್ರಾಣಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ ಪತಂಜಲಿ ಮಹರ್ಸಿಗಳು ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಇದನ್ನು ಗುರುಗಳ ಮೂಲಕ ಪಡೆದುಕೊಂಡು ಸಂತ್ರಪ್ತ ಜೀವನ ಸಾಗಿಸಿ ಎಂದರು. 

ನಿವೃತ್ತ ಶಿಕ್ಷಕರಾದ ಎಂ ಎಂ ಕರ್ಕಿಕರ  ಕಿಸಾನ್ ಸಮೀತಿಯ ಅದ್ಯಕ್ಷ  ಅಭಯ ಮರವಳ್ಳಿ ಯುವ ಪ್ರಭಾರಿ ಸತೀಸ ನಾಯ್ಕ, ಸಂವಾದ ಪ್ರಭಾರಿ ರಾಧಿಕಾ ಆಚಾರಿ, ಮಾತನಾಡಿದರು, ಇದೇ ಸಂದರ್ಬದಲ್ಲಿ ರಾಮಕೃಷ್ಣ ಗುಂದಿ ಹಾಗೂ ಪತಂಜಲಿ ಸಮೀತಿಯ ತಾಲೂಕಾ ಪ್ರಭಾರಿ  ಯೋಗಗುರು ವಿನಾಯಕ ಗುಡಿಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಕಾರ್ಯಕೃಮವನ್ನು ಪ್ರಚಾರ ಸಮೀತಿಯ ಸದಸ್ಯ ಪ್ರಶಾಂತ ಶೆಟ್ಟಿ ನಿರ್ವಹಿಸಿದರು, ನಿರುಪಮಾ ಶ್ಯಾವiಸುಂದರ ಪ್ರಾರ್ಥಿಸಿದರು, ಶಿಕ್ಷಕರಾದ ವಿ ಕೆ ನಾಯರ  ಸ್ವಾಗತಿಸಿದರು, ರಾಜು ಹರಿಕಂತ್ರ ಕಣಗೀಲ್ ವಂದಿಸಿದರು, ಕಾರ್ಯಕೃಮದಲ್ಲಿ ರಾಮಾ ನಾಯ್ಕ, ಶ್ರಿನಿವಾಸ ಶೇಟ್ಟಿ, ರವಿ ನಾಯ್ಕ, ದೀಪಕ ನಾಯ್ಕ, ಸ್ಮಿತಾ ರಾಯಚೂರು, ಯೋಗಿತಾ ಶೆಟ್ಟಿ, ವಿಜಯಲಕ್ಷ್ಮಿ ಕಾಮತ, ರಾಜೇಶ ಶೇಟ್ಟಿ, ಲತಾ ನಾಯ್ಕ, ಅದ್ವಿತ್ ನಾಯಕ,ನಾಗರಾಜ ಶೆಟ್ಟಿ ಇತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button