ಅಮರನಾಥ ಯಾತ್ರೆಯ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತ: ಉತ್ತರಕನ್ನಡ ಜಿಲ್ಲಾಡಳಿತದಿಂದ ನಿಯಂತ್ರಣ ಕೊಠಡಿ ಸ್ಥಾಪನೆ

ಅಗತ್ಯ ನೆರವಿಗಾಗಿ ಸಂಪರ್ಕಿಸಲು ಸೂಚನೆ

ಕಾರವಾರ: ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆಯ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತ ಸಂಬವಿಸಿದ್ದು, ಪಹಾರ್ ಗಂಜ್ ಎಂಬಲ್ಲಿ ಹಲವಾರು ಯಾತ್ರಾರ್ಥಿಗಳು ಸಿಲುಕಿದ್ದಾರೆ ಎಂದು ತಿಳಿದು ಬಂದಿರುತ್ತದೆ. ಇಲ್ಲಿ ಸಿಲುಕಿರುವ ಜಿಲ್ಲೆಯ ಸಂತ್ರಸ್ತರು ಮತ್ತು ಅವರ ಕುಟುಂಬಗಳ ಅಗತ್ಯತೆಗಳನ್ನು ಪರಿಹರಿಸಲು ಉತ್ತರ ಕನ್ನಡ ಜಿಲ್ಲಾಡಳಿತವು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದು, ಯಾವುದೇ ರೀತಿಯ ಅಗತ್ಯ ನೆರವಿಗಾಗಿ 08382229857 ಗೆ ಸಂಪರ್ಕಿಸಲು ಸೂಚಿಸಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version