Focus News
Trending

ಹೊನ್ನಾವರದಲ್ಲಿ ಇಂದು 14 ಕರೊನಾ ಕೇಸ್

105 ಸೋಂಕಿತರಿಗೆ ಹೋಮ್ ಐಸೋಲೇಷನ್
ಇಂದು ಮೂವರ ಬಿಡುಗಡೆ

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ತಾಲೂಕಿನ ಸುತ್ತಮುತ್ತಲಿನ ಭಾಗದಲ್ಲಿ ಇಂದು ಒಟ್ಟು 14 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದೆ. ಪಟ್ಟಣದ ಕೆಳಗಿನ ಪಾಳ್ಯದ 43 ವರ್ಷದ ಪುರುಷ, ಹೆರೆಂಗಡಿ 60 ವರ್ಷದ ಪುರುಷ, ದೊಡ್ಡ ಗುಂದದ 35 ವರ್ಷದ ಪುರುಷ, ನಗರೆಯ 67 ವರ್ಷದ ಪುರುಷ, 65 ವರ್ಷದ ಮಹಿಳೆ, ಕವಲಕ್ಕಿಯ 29 ವರ್ಷದ ಪುರುಷ, 59 ವರ್ಷದ ಪುರುಷ, 20 ವರ್ಷದ ಯುವತಿ, ಟೊಂಕದ 26 ವರ್ಷದ ಮಹಿಳೆ, ಮೋಳ್ಕೋಡದ 67 ವರ್ಷದ ಮಹಿಳೆ, ಮಾಗೋಡಿನ 60 ವರ್ಷದ ಮಹಿಳೆ, ದಬ್ಬೋಡಿನ 48 ವರ್ಷದ ಮತ್ತು ಹಾಡಗೇರಿಯ 24 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.


ಇದೇ ವೇಳೆ, ಇಂದು ತಾಲೂಕಾ ಆಸ್ಪತ್ರೆಯಿಂದ ಮೂವರು ಬಿಡುಗಡೆಯಾಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ-19 ಚಿಕಿತ್ಸೆ ಪಡೆಯುತ್ತಿದ್ದು, 105 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button