ರಕ್ತದಾನ ಶ್ರೇಷ್ಠವಾದದ್ದು: ಡಾ. ಕೆ ಶ್ರೀಧರ್

ಸಿದ್ದಾಪುರ: ರಕ್ತವನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ. ರೋಗಿಗಳಿಗೆ ಬೇಕಾದ ರಕ್ತವನ್ನು ಇನ್ನೊಬ್ಬರಿಂದ ಸಂಗ್ರಹಿಸಿಯೆ ನೀಡಬೇಕಾಗಿರುತ್ತದೆ. ಹಾಗಾಗಿ ರಕ್ತದಾನ ಶ್ರೇಷ್ಠವಾದದ್ದು ಎಂದು ಶ್ರೇಯಸ್ ಆಸ್ಪತ್ರೆ ಯ ಡಾ. ಕೆ ಶ್ರೀಧರ್ ವೈದ್ಯ ಅವರು ಹೇಳಿದರು. ಅವರು ಶ್ರೇಯಸ್ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಅತಿ ಅವಶ್ಯಕವಾಗಿ ಬೇಕಾಗಿರುತ್ತದೆ ಅಪಘಾತವಾದಾಗ, ಹೆರಿಗೆ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ವೇಳೆ, ರಕ್ತದ ಕೊರತೆ ಇರುವ ರೋಗಿಗಳಿಗೆ, ಪೌಷ್ಟಿಕತೆ ಕೊರತೆ ಇರುವವರಿಗೆ ಅತೀ ಅವಶ್ಯಕತೆ ಇರುತ್ತದೆ ಅದಕೋಸ್ಕರ ಅರೋಗ್ಯವಂತರು ರಕ್ತ ದಾನ ಮಾಡುವುದರಿಂದ ರೋಗಿಗಳಿಗೆ ಸಹಾಯವಾಗುತ್ತದೆ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ಆಗಬೇಕು ಎಂದರು. ಡಾ ಶ್ರೇಯಸ್ ವೈದ್ಯ ಮಾತನಾಡಿ ರಕ್ತದಾನ ಮಾಡುವುದರಿಂದ ಅರೋಗ್ಯ ಕ್ಕೆ ಹಲವಾರು ರೀತಿಯ ಪ್ರಯೋಜನ ಗಳಿವೆ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ, ಹೃದಯಾಘಾತ ತಡೆಯಲು ಸಾಧ್ಯವಾಗುತ್ತದೆ ವ್ಯಾಯಾಮ ಮಾಡಿ ಬೊಜ್ಜು ಕರಗಿಸುವುದಕ್ಕಿಂತ ಇದು ಸುಲಭ ವಿಧಾನ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು ಈ ಸಂದರ್ಭದಲ್ಲಿ ಡಾ ಸುಮಂಗಲ ವೈದ್ಯ, ಡಾ ಜ್ಯೋತಿ ಎ ಜಿ ನಾಯ್ಕ್ ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Exit mobile version