ರಸ್ತೆ ಬಿಟ್ಟು ಹೆದ್ದಾರಿ ಅಂಚಿನ ತಗ್ಗಿನಲ್ಲಿ ಬಿದ್ದ ಥಾರ್ ? ಜಿಲ್ಲೆಯ ಪ್ರಮುಖ ಹುದ್ದೆ ನಿಭಾಯಿಸಿದ ವೈದ್ಯರ ಪುತ್ರ ಅಪಾಯದಿಂದ ಪಾರು 

ಅಂಕೋಲಾ: ಚಲಿಸುತ್ತಿದ್ದ ವಾಹನವೊಂದು, ಚಾಲಕನ ನಿಯಂತ್ರಣ ತಪ್ಪಿ  ಪಲ್ಟಿಯಾಗಿ,ಹೆದ್ದಾರಿ ಅಂಚಿನ ತಗ್ಗು ಪ್ರದೇಶದಲ್ಲಿ ಬಿದ್ದ ಘಟನೆ ಶನಿವಾರ  ಸಂಭವಿಸಿದೆ.  ತಾಲೂಕಿನಲ್ಲಿ ಹಾದು ಹೋಗಿರುವ ರಾ ಹೆ 66 ರ ಅಂಕೋಲಾದಿಂದ ಕಾರವಾರ ಕಡೆ ಹೋಗುವ ಮಾರ್ಗ ಮಧ್ಯೆ ,ಅಲಗೇರಿ ಕ್ರಾಸ್ ಗಿಂತ ಸ್ವಲ್ಪ ಮುಂದೆ ಗೌರಿಕೆರೆ  ಎಂದು ಕರೆಯಿಸಿಕೊಳ್ಳುವ ಪ್ರದೇಶದ ಹತ್ತಿರ  ಈ ಘಟನೆ ಸಂಭವಿಸಿದೆ.

ಜಿಲ್ಲಾ ಮಟ್ಟದ ಪ್ರಮುಖ ಹುದ್ದೆಯೊಂದನ್ನು ನಿಭಾಯಿಸಿರುವ ಅಂಕೋಲಾದ ವೈದ್ಯರೊಬ್ಬರ ಪುತ್ರ, ಅಂಕೋಲಾ ಕಡೆಯಿಂದ ಅವರ್ಸಾ ಕಡೆಗೆ ಮಹೀಂದ್ರಾ ಥಾರ್ ಎನ್ನುವ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಹೆದ್ದಾರಿಯಲ್ಲಿ ನಿಂತಿದ್ದ ನೀರು ಇಲ್ಲವೇ ಬೇರೆ ಯಾವುದೋ ಕಾರಣದಿಂದ, ಚಾಲಕನ ನಿಯಂತ್ರಣ ತಪ್ಪಿದ ವಾಹನ, ಪಲ್ಪಿಯಾಗಿ ಹೆದ್ದಾರಿ ಅಂಚಿನ  ತಗ್ಗು ಪ್ರದೇಶಕ್ಕೆ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.  ಆಕಸ್ಮಿಕವಾಗಿ ಸಂಭವಿಸಿದ ಈ ರಸ್ತೆ ಅವಘಡದಲ್ಲಿ ವಾಹನ ಬಹುತೇಕ ಜಖಂ ಗೊಂಡರೂ ಸಹ ಅದೃಷ್ಟವಶಾತ್ ವೈದ್ಯರ ಪುತ್ರ ಸಂಭವನೀಯ ಅಪಾಯದಿಂದ  ಪಾರಾದಂತಿದೆ.

ಪಿ ಎ ಸೈ ಸುನೀಲ ಎಚ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿದ್ದು,ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. *ಕಳೆದ ಎರಡು ವರ್ಷದ ಹಿಂದೆ ಆಗಸ್ಟ್ 7ರಂದು ಕಾರವಾರದ ಮೀಟಿಂಗ್ ಗೆ  ತೆರಳುತ್ತಿದ್ದ ಅಧಿಕಾರಿಗಳಿದ್ದ ಕಾರು, ಇದೇ ಪ್ರದೇಶದ ಹತ್ತಿರ ಹೆದ್ದಾರಿಯಲ್ಲಿ ನಿಂತಿದ್ದ ನೀರನ್ನು ಅಂದಾಜಿಸಲಾಗದೆ, ಚಾಲಕನ ನಿಯಂತ್ರಣತಪ್ಪಿ ಕಾರು ಪಲ್ಟಿಯಾಗಿ ಲೋಕೋಪಯೋಗಿ ಇಲಾಖೆಯ ಸಿದ್ದಾಪುರ ತಾಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರ ರೋರ್ವರು ಮೃತಪಟ್ಟು, ಇತರ ಮೂವರು ಗಂಭೀರ ಗಾಯಗೊಂಡು ,ಚಾಲಕನೂ ಗಾಯಾಳುವಾಗಿದ್ದ  ಕಹಿ ಘಟನೆ ನೆನಪಿಸಿಕೊಂಡ ಕೆಲವರು, ಚತುಷ್ಟಥ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಆರ್ ಬಿ ಅವೈಜ್ಞಾನಿಕ ಕಾಮಗಾರಿಯಿಂದಲೇ ಇಂತಹ ಅಪಘಾತಗಳಾಗುತ್ತಿವೆ ಎಂದು ಹಿಡಿಶಾಪ ಹಾಕಿದಂತಿದ್ದು , ಸಂಬಂಧಿಸಿದ ದವರು ಟೋಲ್ ಶುಲ್ಕ ವಸೂಲಿಗಷ್ಟೇ ಮುಂದಾಗದೇ, ಹತ್ತಾರು ಕಡೆ ನಡೆಸಿರುವ ಅರೆ ಬರೆ ಕಾಮಗಾರಿ ಪೂರ್ಣ ಗೊಳಿಸಿ, ಹೆದ್ದಾರಿಯಲ್ಲಿ ಸಂಚಾರ ಸುರಕ್ಷತೆಗೂ ಒತ್ತು ನೀಡಿ ಜವಾಬ್ದಾರಿ ನಿಭಾಯಿಸಬೇಕಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version