ಹೊನ್ನಾವರ: ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಕಲಾವಿದ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಹಾಗೂ ಪಂಡಿತ್ ರವೀಂದ್ರ ಯಾವಗಲ್ ಇವರಿಂದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಸ್ಪಿಕ್ ಮೆಕೆ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸ್ಪಿ
ಕ್ ಮೆಕೆ ಇದು ಯುವ ಜನಾಂಗದವರಲ್ಲಿ ಶಾಸ್ತ್ರೀಯ ಸಂಗೀತದ ಅಭಿರುಚಿಯನ್ನು ಬೆಳೆಸುವ ದೃಷ್ಟಿಯಿಂದ ಹುಟ್ಟಿಕೊಂಡ ಸಾಮಾಜಿಕ ಸಂಸ್ಥೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಂಗೀತವನ್ನು ಪ್ರಚುರಪಡಿಸುತ್ತಾ ಬಂದಿರುವ ಈ ದಿಗ್ಗಜ ಕಲಾವಿದರು ಎಸ್.ಡಿ.ಎಂ.ಕಾಲೇಜಿನಲ್ಲಿ ಸಂಗೀತ ಸುಧೆಯನ್ನು ಹರಿಸಿದರು. ಅಲ್ಲದೆ ಈ ಇಬ್ಬರು ಕಲಾವಿದರನ್ನು ಪಂಚವಾದ್ಯಗಳ ಮೂಲಕ ,ತಿಲಕ ಇಟ್ಟು ,ಆರತಿ ಬೆಳಗಿ ಕಾಲೇಜಿಗೆ ಬರಮಾಡಿಕೊಳ್ಳಲಾಯ್ತು.
ಪಂ.ಪ್ರವೀಣ್ ಗೋಡ್ಖಿಂಡಿ ಹಾಗೂ ಪಂ.ರವೀoದ್ರ ಯಾವಗಲ್ ಅವರನ್ನು ಆತ್ಮೀಯವಾಗಿ ಶಾಲು ಹೊದಿಸಿ ಗೌರವಿಸಲಾಯಿತು. ಇದೇ ವೇಳೆ ಮಾತನಾಡಿದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ,ಈ ದಿಗ್ಗಜ ಕಲಾವಿದರು ನಮ್ಮ ಕಾಲೇಜಿಗೆ ಬಂದಿರುವುದು ಸುದೈವ. ಈ ಕಲಾವಿದರು ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ. ಇಂತಹ ಕಲಾವಿದರು ನಮ್ಮಲ್ಲು ಹುಟ್ಟಿಕೊಳ್ಳಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ.ರೇಣುಕಾದೇವಿ ಗೋಳಿಕಟ್ಟಿ ವೇದಿಕೆಯಲ್ಲಿ ಹಾಜರಿದ್ದರು. ಅಲ್ಲದೆ ವಿದ್ಯಾರ್ಥಿಗಳ ಹಾಗೂ ಸಂಗೀತಾಸಕ್ತರ ಜೊತೆಗೆ ಸಂವಾದವನ್ನು ನಡೆಸಿದರು.
ಕುಮಾರಿ ನಿಹಾರಿಕಾ ಪ್ರಾರ್ಥಿಸಿದರು,ಪದವಿ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ ಹೆಗಡೆ ವಂದಿಸಿದರು. ಪ್ರಶಾಂತ್ ಹೆಗಡೆ, ಮೂಡಲಮನೆ ನಿರೂಪಿಸಿದರು. ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಸದಸ್ಯರು, ಪದವಿ , ಪದವಿ ಪೂರ್ವ ಕಾಲೇಜು, ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪಂ.ಪ್ರವೀಣ್ ಗೋಡ್ಖಿಂಡಿ ರಾಗ್- ಮಧುವಂತಿ ಪ್ರಸ್ತುತ ಪಡಿಸಿ ನೆರೆದ ಸಂಗೀತ ಪ್ರೇಮಿಗಳನ್ನು ರಂಜಿಸಿದರು.
ವಿಸ್ಮಯ ನ್ಯೂಸ್, ಹೊನ್ನಾವರ