ಪ್ರತಿಭಾವಂತ ಯಕ್ಷಗಾನ ಕಲಾವಿದ ಅಕಾಲಿಕ ನಿಧನ

ಹೊನ್ನಾವರ: ತಾಲೂಕಿನ ಬೈಲಗದ್ದೆಯ ನಿವಾಸಿ ಬಡಗುತಿಟ್ಟು ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ (39) ನಿಧನ ಹೊಂದಿದ್ದಾರೆ. ಅವಿವಾಹಿತರಾಗಿದ್ದ ಇವರು ತಂದೆ, ತಾಯಿ ಹಾಗೂ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದಲ್ಲಿ ಕೆರೆಮನೆ ಶಂಭು ಹೆಗಡೆ ಹಾಗೂ ಹೆರಂಜಾಲು ಗೋಪಾಲ ಗಾಣಿಗರ ಶಿಷ್ಯರಾಗಿ ಅಭ್ಯಾಸ ಮಾಡಿದ ಬಳಿಕ ಬಯಲಾಟ ಮೇಳಗಳಾದ ಗುಂಡುಬಾಳ, ಮಡಾಮಕ್ಕಿ, ಸಿಗಂದೂರು ಮತ್ತು ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ ಹಾಗೂ ಪೆರ್ಡೂರು ಮೇಳಗಳಲ್ಲಿ ಎರಡು ದಶಕಗಳ ಕಾಲ ವಿವಿಧ ಪೋಷಕ ಪಾತ್ರಗಳ ನಿರ್ವಹಣೆಯಿಂದ ಕಲಾಭಿಮಾನಿಗಳ ಗಮನ ಸೆಳೆದಿದ್ದರು. ತೀವ್ರ ಅನಾರೋಗ್ಯದ ಕಾರಣದಿಂದ ಕಳೆದ ವರ್ಷ ಯಕ್ಷಗಾನ ತಿರುಗಾಟ ಮಾಡಿರಲಿಲ್ಲ. ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗ, ಕಲಾವಿದರು, ಕಲಾಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version