ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ: ಜಿಲ್ಲೆಯ ಎಲ್ಲೆಡೆ ಮಳೆ ಮುಂದುವರಿದಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ( ಮಂಗಳವಾರ, ಜುಲೈ 25ರಂದು ಕೂಡ ಉತ್ತರಕನ್ನಡದ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಅಂಚೆ ಇಲಾಖೆಯಿಂದ ನೇಮಕಾತಿ: 63 ಸಾವಿರ ವರೆಗೆ ಮಾಸಿಕ ವೇತನ

ಅಂಕೋಲಾ: ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ,ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಹಂತದಿಂದ ಪಿಯುಸಿ ವರೆಗಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ದಿನಾಂಕ ಜುಲೈ 25 ಮಂಗಳವಾರವೂ ಮುಂದುವರಿಸಲಾಗಿದೆ ಎಂದು ತಹಶೀಲ್ದಾರ್ ಪ್ರವೀಣ ಹುಚ್ಚಣ್ಣನವರ ತಿಳಿಸಿದ್ದಾರೆ.

ವಂದಿಗೆ ಗ್ರಾಮದಲ್ಲಿ ಮನೆಯೊಂದು ಭಾಗಶಃ ಹಾನಿಯಾಗಿದೆ. ಗಂಗಾವಳಿ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದ್ದು ಹೊನ್ನೆಬೈಲ್ ವ್ಯಾಪ್ತಿಯ ಬಿಳೇಹೊಂಯ್ಗಿ ಗ್ರಾಮದಲ್ಲಿ ನೀರು ನುಗ್ಗುವ ಆತಂಕ ಎದುರಾಗಿತ್ತು. ತಗ್ಗು ಪ್ರದೇಶದಲ್ಲಿರುವ 1 – 2 ಮನೆಯವರು ಮೇಲ್ಗಡೆ ಇರುವ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದು,ಸದ್ಯಕ್ಕೆ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆದಿಲ್ಲ.

ಆದರೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ,ತಾಲೂಕ ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದು,ಸ್ಥಳೀಯರು ಅನಗತ್ಯ ಆತಂಕ ಪಡಬಾರದು.ತುರ್ತು ಸಂದರ್ಭದಲ್ಲಿ 112ಕ್ಕೂ ಕರೆ ಮಾಡಬಹುದು ಮತ್ತು ತಮ್ಮ ಹತ್ತಿರದ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ನೋಡಲ್ ಅಧಿಕಾರಿಗಳು, ಮತ್ತು ತಾಲೂಕ ಆಡಳಿತದ ಸಹಾಯವಾಣಿ ಸಂಖ್ಯೆ (08388230243) ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಹೊನ್ನಾವರದಲ್ಲೂ ನಾಳೆ ರಜೆ ಮುಂದುವರಿಕೆ

ಹೊನ್ನಾವರ : ತಾಲೂಕಿನಲ್ಲಿ ಮಳೆ ಜೋರಾಗಿ ಬೀಳುತ್ತಿರುವುದರಿಂದ ಸಹಾಯಕ ಆಯುಕ್ತರ ನಿರ್ದೇಶನ ಹಾಗೂ ಮುಖ್ಯಶಿಕ್ಷಕರ ವಿನಂತಿ ಮೇರೆಗೆ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚರ್ಚಿಸಿ ನಾಳೆ ( ಮಂಗಳವಾರ ) ಸಹ ತಾಲೂಕಿನ ಎಲ್ಲ ಅಂಗನವಾಡಿ ಹಾಗೂ 1-12 ನೆ ತರಗತಿಗಳಿಗೆ ರಜೆ ಮುಂದುವರಿಸಲಾಗಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ

Exit mobile version