ಅಂಕೋಲಾ: ರಾಜ್ಯದ ಬೇರೆ ಬೇರೆ ಭಾಗಗಳ ಕಂದಾಯ ಇಲಾಖೆಯ ಒಟ್ಟೂ 46 (ಗ್ರೇಡ್ 1 ಮತ್ತು ಗ್ರೇಡ್ 2 ) ತಹಶೀಲ್ದಾರ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಪಟ್ಟಿಯಲ್ಲಿ 18 ನೇ ಕ್ರಮಾಂಕದಲ್ಲಿರುವ ಹಾಲಿ ಅಂಕೋಲಾ ತಾಲೂಕು ಗ್ರೇಡ್ 1 ತಹಶೀಲ್ದಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ ಸಿ ಹುಚ್ಚಣ್ಣನವರನ್ನು ಧಾರವಾಡದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಖಾಲಿಯಿದ್ದ ತಹಶೀಲ್ದಾರ (ಶಿಷ್ಟಾಚಾರ ) ಹುದ್ದೆಗೆ ವರ್ಗಾಯಿಸಲಾಗಿದೆ.
ಆದರೆ ಮೊದಲ ವರ್ಗಾವಣೆ ಪಟ್ಟಿಯಲ್ಲಿ ಪ್ರವೀಣ ಹುಬ್ಬಣ್ಣನವರ ವರ್ಗಾವಣೆ ಯಿಂದ ತೆರವಾಗುವ ಅಂಕೋಲಾ ತಹಶೀಲ್ದಾರ್ ಹುದ್ದೆಗೆ ಯಾರನ್ನೂ ವರ್ಗಾಯಿಸದಿರುವುದರಿಂದ ಸದ್ಯ ಅಂಕೋಲಾದ ತಹಶೀಲ್ದಾರ ಹುದ್ದೆ ಖಾಲಿ ಇರಲಿದ್ದು,, ಮುಂದೆ ಈ ಹುದ್ದೆಗೆ ಯಾರು ಬರಲಿದ್ದಾರೆ ಕಾದು ನೋಡಬೇಕಿದೆ. ಕಳೆದ ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಸಮಯದಲ್ಲಿ (4 -3 – 2023ರಂದು ) ಅಂಕೋಲಾ ತಹಶೀಲ್ದಾರ್ ರಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಪ್ರವೀಣ್ ಹುಚ್ಚಣ್ಣನವರ್, ಅಂಕೋಲಾದ ತಮ್ಮ ಆಡಳಿತ ಅವಧಿಯ ಅತಿ ಕಡಿಮೆ ಅವಧಿಯಲ್ಲಿ ನೇರ -ನಡೆ ನುಡಿಗಳಿಂದ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಅಂಕೋಲಾ ತಹಶೀಲ್ದಾರ ವರ್ಗಾವಣೆ ಜೊತೆಯಲ್ಲಿಯೇ ಜಿಲ್ಲೆಯ ದಾಂಡೇಲಿ , ಶಿರಸಿ -ಸಿದ್ಧಾಪುರ, ಯಲ್ಲಾಪುರ ವ್ಯಾಪ್ತಿಯಲ್ಲಿಯೂ ಆಯಾ ವ್ಯಾಪ್ತಿಯ ತಹಶೀಲ್ದಾರ ವರ್ಗಾವಣೆಯಿಂದ ಕೆಲ ಬದಲಾವಣೆಗಳಾಗಿದೆ.
ಕರ್ನಾಟಕದ ರಾಜ್ಯಪಾಲರ ಆದೇಶದ ಅನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ (ಸೇವೆಗಳು – 3) ಜಿ. ಎನ್. ಸುಶೀಲ 28-07-2023 ರ ಶುಕ್ರವಾರ ಕಂದಾಯ ಇಲಾಖೆಯ ತಹಶೀಲ್ಕಾರ ಗ್ರೇಡ್ 1 ಮತ್ತು ಗ್ರೇಡ್ 2 ವೃಂದದ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ