ಅಂಕೋಲಾ : ಸಾಂಪ್ರದಾಯಿಕ ಮೀನುಗಾರಿಕೆಗೆ ನಡೆಸುತ್ತಿದ್ದ ಮೀನುಗಾರನೋರ್ವ, ಸಮುದ್ರದಲೆಗಳ ರಭಸಕ್ಕೆ ಸಿಕ್ಕ ಪಾತಿದೋಣಿಯಿಂದ ಸಮುದ್ರ ನೀರಿನಲ್ಲಿ ಬಿದ್ದು, ಮುಳುಗಿ ಅಸ್ಪಸ್ಥಗೊಂಡವನನ್ನು ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ , ವೈದ್ಯರು ಆತನು ಮೃತಪಟ್ಟಿರುವುದಾಗಿ ತಿಳಿಸಿದ ಘಟನೆ ನಡೆದಿದೆ.
ಭಾವಿಕೇರಿ – ಹರಿಕಂತ್ರ ವಾಡಾ ನಿವಾಸಿ ವಿಠಲ ತಂದೆ ಗೋವಿಂದ ಹರಿಕಂತ್ರ (49 ) ಮೃತ ದುರ್ದೈವಿಯಾಗಿದ್ದಾನೆ. ಈತನು ಪಾತಿದೋಣಿಯಲ್ಲಿ ಹರಿಕಂತ್ರ ವಾಡ ವ್ಯಾಪ್ತಿಯ ಸಮುದ್ರದ್ದಲ್ಲಿ ಮೀನು ಹಿಡಿಯಲು ಬಲೆ ಹಾಕಿ ತೆಗೆಯುತ್ತಿರಬೇಕಾದರೆ , ಜೋರಾಗಿ ಬಂದ ಸಮುದ್ರದ ಅಲೆಗೆ ಪಾತಿ ದೋಣಿ ರೋಲ್ ಆಗಿದ್ದರಿಂದ ಈ ಜಲ ಅವಘಡ ಸಂಭವಿಸಿರುವ ಕುರಿತು ಮೃತ ವಿಠಲ ಹರಿಕಂತ್ರ, ಜೊತೆಯಲ್ಲಿಯೇ ಮೀನುಗಾರಿಕೆ ನಡೆಸುತ್ತಿದ್ದ ಚಂದ್ರಕಾಂತ ಹರಿಕಂತ್ರ ಪೋಲೀಸ್ ದೂರಿನಲ್ಲಿ ತಿಳಿಸಿದ್ದು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್ ಐ ಸುನೀಲ ಹುಲ್ಗೊಳ್ಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ