ಅಂಕೋಲಾ; ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹ ದುಷ್ಚಟಗಳಿಗೆ ದಾಸರಾಗಬಾರದು ವ್ಯಸನಗಳಿಂದ ಮಾನಸಿಕ, ದೈಹಿಕ ಅನಾರೋಗ್ಯ ಮತ್ತು ಕೌಟುಂಬಿಕ, ಸಾಮಾಜಿಕ ಸ್ವಾಸ್ಥ್ಯ ನಾಶವಾಗುತ್ತದೆ ಎಂದು ತಾಲೂಕು ಆರೋಗ್ಯ ಇಲಾಖೆ ಸಹಾಯಕ ನರ್ಸಿಂಗ್ ಮತ್ತು ಮಿಡ್‍ವೈಪರಿ ಅಧಿಕಾರಿ ಲೀಲಾವತಿ ನಾಯ್ಕ ಅಭಿಪ್ರಾಯಪಟ್ಟರು. ಪಟ್ಟಣದ ಜಿ. ಸಿ. ಕಾಲೇಜಿನಲ್ಲಿ ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ಎನ್.ಎಸ್.ಎಸ್. ಘಟಕ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಂದಿಗೆ ಸಮೂದಾಯ ಆರೋಗ್ಯಾಧಿಕಾರಿ ಪೂಜಾ ನಾಯ್ಕ “ದುಷ್ಚಟಗಳಿಗೆ ದುರ್ಬಲ ಮನಸ್ಸು ಆಶ್ರಯ ನೀಡುತ್ತದೆ ಇತ್ತಿಚಿಗೆ ಯುವಕರಿಗೆ ಸರಿದೊರೆಯಾಗಿ ಯುವತಿಯರು ಸಹ ಮಾದಕ ಪದಾರ್ಥಗಳ ಸೇವನೆಯಲ್ಲಿ ತೊಡಗಿರುವುದು ಕಳವಳಕಾರಿಯಾಗಿದೆ” ವ್ಯಸನಿಗಳಿಗೆ ಆಪ್ತ ಸಮಾಲೋಚನೆ, ಡಿ ಎಡಿಕ್ಸನ್ ಕೇಂದ್ರಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಬೇಕು ಕುಂಟುಂಬ ಸದಸ್ಯರು, ಸ್ನೇಹಿತರು ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಎಸ್. ವಿ. ವಸ್ತ್ರದ ಮಹಾಂತ ಶಿವಯೋಗಿಗಳ ವ್ಯಸನ ವಿರೋಧಿ ಅಭಿಯಾನ, ದುಷ್ಚಟಗಳನ್ನು ಭಿಕ್ಷೆಯಾಗಿ ಸ್ವೀಕರಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಎನ್.ಎಸ್.ಎಸ್. ಅಧಿಕಾರಿ ಪ್ರೊ. ಆರ. ಪಿ. ಭಟ್ ವಂದಿಸಿದರು. ಪ್ರೊ. ಶಾರದಾ ಐರಾಣಿ, ಪ್ರೊ. ಸುಗಂಧಾ ನಾಯಕ, ಪ್ರೊ. ವೇದಾ ಭಟ್, ಅಧೀಕ್ಷಕರಾದ ಎಸ್. ಎಂ. ಸಜ್ಜನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ