Important
Trending

ಕೆಲಸಕ್ಕೆಂದು ಹೋದವ ಬಹುಕಾಲದಿಂದ ಮನೆಗೆ ಮರಳದ ಮಗ : ತಾಯಿಯ ಕಣ್ಣೀರು

ಅಂಕೋಲಾ: ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರ ಹೋಗಿದ್ದ ಯುವಕ ಮನೆಗೆ ಮರಳದೆ ಕಾಣೆಯಾಗಿರುವ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ದೂರೊಂದು ತಡವಾಗಿ ದಾಖಲಾಗಿದೆ. ತಾಲೂಕಿನ ಬಾಳೇಗುಳಿ ಸಮೀಪದ
ಬೊಗ್ರಿಬೈಲ್ ನಿವಾಸಿ ಗೌರೀಶ ಗೋವಿಂದ ಗೌಡ (28) ಕಾಣೆಯಾದ ಯುವಕ.

ಕೂಲಿ ಕೆಲಸಗಾರನಾದ ಈತ 29 ಜೂನ್ 2019 ರಂದು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟವನು ಇದುವರೆಗೆ ಬಾರದೇ ಇರುವ ಕಾರಣ ಎಲ್ಲಡೆ ಹುಡುಕಾಟ ನಡೆಸಿದರೂ ಈ ವರೆಗೂ ತನ್ನ ಮಗ ಸಿಕ್ಕಿಲ್ಲ ಎಂದು ನೊಂದ ತಾಯಿ ಪೋಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಮೇಲಿನ ಚಿತ್ರದಲ್ಲಿರುವ ಯುವಕ ಎಲ್ಲಿಯಾದರೂ ಕಂಡು ಬಂದರೆ, ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button