ತಾಲೂಕಾ ಮಟ್ಟದ ಅಂತರ್‌ ಪ್ರೌಢಶಾಲಾ ಚದುರಂಗ ಮತ್ತು ಜಾನಪದಗೀತೆ ಸ್ಪರ್ಧೆ

ಕುಮಟಾ: ಕುಮಟಾ ಮಿರ್ಜಾನಿನ ಬಿಜಿಎಸ್‌ ಕೇಂದ್ರೀಯ ವಿದ್ಯಾಲಯದಲ್ಲಿ ದಿನಾಂಕ: 03-08-2023ರಂದು ತಾಲೂಕಾ ಮಟ್ಟದ ಅಂತರ್‌ ಪ್ರೌಢಶಾಲಾ ಚದುರಂಗ ಮತ್ತು ಜಾನಪದಗೀತೆ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 9:00ಕ್ಕೆ ಕುಮಟಾ ತಾಲೂಕಾ ಮಟ್ಟದ ಅಂತರ್‌ ಪ್ರೌಢಶಾಲಾ ಚದುರಂಗ ಮತ್ತು ಜಾನಪದಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು  ಕರೆ ಮಾಡಿ ಅಥವಾ ದಿನಾಂಕ 03-08-2023ರಂದು ಬೆಳಿಗ್ಗೆ 9:00ಕ್ಕೆ
ಖುದ್ದಾಗಿ ಬಂದು ತಮ್ಮ  ಹೆಸರನ್ನು ನೋಂದಾಯಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಜಿ.
ಮಂಜುನಾಥ, ಆಡಳಿತಾಧಿಕಾರಿಗಳು, ಮೊ: 8310170532, ಬಾಲಕೃಷ್ಣ ನಾಯಕ, ದೈಹಿಕ ಶಿಕ್ಷಣ
ಶಿಕ್ಷಕರು, ಮೊ: 8884657968  ಹಾಗೂ ಶ್ರೀಮತಿ ರಂಜನಾ ಆಚಾರ್ಯ, ಸಂಗೀತ ಶಿಕ್ಷಕಿ,
ಮೊ: 6362108300 ಇವರನ್ನು ಸಂಪರ್ಕಿಸಬಹುದು.

ಜಾನಪದ-ಗೀತೆ ಸ್ಪರ್ಧೆಯ ನಿಯಮಗಳು ಮತ್ತು ಮಾರ್ಗಸೂಚಿಗಳು:-

  1. ಪ್ರತಿ ಶಾಲೆಯು ಈ ಸ್ಪರ್ಧೆಗೆ ಇಬ್ಬರು ವಿದ್ಯಾರ್ಥಿಗಳನ್ನು ಕಳುಹಿಸಬಹುದು.
  2. ಜಾನಪದ ಹಾಡು ಕನ್ನಡದಲ್ಲಿ ಮೂಲ ರಾಗದೊಂದಿಗೆ ಮಾತ್ರ ಇರಬೇಕು (ಚಲನಚಿತ್ರ ಆಧಾರಿತವಲ್ಲ)
  3. ತೀರ್ಪಿನ ಮಾನದಂಡ (ಕೆಳಗಿನ ಪ್ರತಿಯೊಂದಕ್ಕೂ 10 ಅಂಕಗಳು) ಸಾಹಿತ್ಯ – 10 ಅಂಕಗಳು
    ಧ್ವನಿ ಮಾಡ್ಯುಲೇಶನ್  (ರಾಗ ಮತ್ತು ಲಯ) – 10 ಅಂಕಗಳು
    ಹಾಡಿನ ಅಭಿವ್ಯಕ್ತಿ  (10 ಅಂಕಗಳು)

ಚದುರಂಗ (ಚೆಸ್) ಸ್ಪರ್ಧೆಯ ನಿಯಮಗಳು ಮತ್ತು ಮಾರ್ಗಸೂಚಿಗಳು:-

  1. ಪ್ರತಿ ಶಾಲೆಯು ಈ ಸ್ಪರ್ಧೆಗೆ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಕಳುಹಿಸಬಹುದು.
  2. ಎಲ್ಲಾ ಅಂತಾರಾಷ್ಟ್ರೀಯ ನಿಯಮಗಳು ಅನ್ವಯಿಸುತ್ತವೆ.

 3.ಸ್ಪರ್ಧೆಯ ಪ್ರಾರಂಭದ ಮೊದಲು ನಿಯಮಗಳ ವಿವರಗಳನ್ನು ಆಟಗಾರರಿಗೆ ತಿಳಿಸಲಾಗುತ್ತದೆ.

  1. ಸ್ವಿಸ್ ಲೀಗ್ ಪದ್ಧತಿಯಲ್ಲಿ ಪಂದ್ಯಾವಳಿಯನ್ನು ನಡೆಸಲಾಗುವುದು.
  2. ಆರ್ಬಿಟರ್ ನಿರ್ಧಾರವು ಅಂತಿಮವಾಗಿರುತ್ತದೆ.
  3. ಭಾಗವಹಿಸುವವರು ತಮ್ಮದೇ  ಆದ ಚೆಸ್ ಬೋರ್ಡ್ ಮತ್ತು ಪಾನ್‌ (ಸೆಟ್) ಗಳನ್ನು ತರಬೇಕು

ಬಹುಮಾನಗಳು:-

ಚದುರಂಗ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ತಲಾ
ರೂ 5000, ಸ್ಮರಣ ಫಲಕ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು.

ಚದುರಂಗ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ
ತಲಾ ರೂ 3000 ಸ್ಮರಣ ಫಲಕ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು.

ಚದುರಂಗ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ತ್ರತೀಯ ಸ್ಥಾನ ಪಡೆದ ವಿಜೇತರಿಗೆ ತಲಾ ರೂ 1000 ಸ್ಮರಣ ಫಲಕ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು.

ವಿಸ್ಮಯ ನ್ಯೂಸ್ ಕುಮಟಾ

Exit mobile version