Follow Us On

Google News
Important
Trending

ಮೂರು ವಾಹನಗಳ ನಡುವೆ ಸರಣಿ ಅಪಘಾತ: ಅಂಗಡಿಗೆ ನುಗ್ಗಿದ ವಾಹನ

ಶಿರಸಿ: ವಾಹನಗಳ ಮಧ್ಯೆ ಸರಣಿ ಅಪಘಾತವಾಗಿ, ವಾಹನವೊಂದು ಅಂಗಡಿಯೊಳಗೆ ನುಗ್ಗಿ ಹಲವರು ಗಾಯಗೊಂಡಿರುವ ಘಟನೆ ತಾಲೂಕಿನ ಬಿಸಲಕೊಪ್ಪ ಬಳಿ ನಡೆದಿದೆ. ಹೌದು, ಬೋಲೆರೋ, ಬಸ್ ಮತ್ತು ಓಮಿನಿ ನಡುವೆ ಸರಣಿ ಅಪಘಾತ ನಡೆದಿದ್ದು, ಇದರಿಂದ ವಾಹನದಲ್ಲಿ ಇದ್ದವರು ಗಾಯಗೊಂಡಿದ್ದಾರೆ. ಮಳಗಿಯಿಂದ ಶಿರಸಿಗೆ ಸಾಗುತ್ತಿದ್ದ ಓಮಿನಿ, ಬೋಲೆರೋ ಹಾಗೂ ಶಿರಸಿಯಿಂದ ಹಾವೇರಿ ಕಡೆ ಚಲಿಸುತ್ತಿದ್ದ ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಓಮಿನಿ ಹಾಗೂ ಬೋಲೆರೋ ರಸ್ತೆ ಬದಿಯಿದ್ದ ಅಂಗಡಿಗಳಿಗೆ ನುಗ್ಗಿದೆ. ಗಾಯಗೊಂಡಿದ್ದವರನ್ನ ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.


ವಿಸ್ಮಯ ನ್ಯೂಸ್, ಶಿರಸಿ

Back to top button