ಬಿಲ್ವಪತ್ರೆ ವೃಕ್ಷವನ್ನು ಶ್ರೀವೃಕ್ಷ ಎಂದು ಕರೆಯುತ್ತಾರೆ. ಇದರಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎನ್ನುವುದು ಪ್ರತೀತಿ ಮತ್ತು ಆಸ್ತಿಕರ ನಂಬಿಕೆ. ಇದರ ಉಪಯೋಗಗಳು ಹಲವಿದ್ದು,ಬಿಲ್ವಪತ್ರೆ ಎಲೆಗಳನ್ನು ಜಜ್ಜಿ ಕಷಾಯ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಜೀವನದಲ್ಲಿ ಶುಗರ್ ಬಿಪಿ ಬರೋದೇ ಇಲ್ಲ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಷ್ ಮಾಡದೆ ಎರಡು ಎಲೆಗಳನ್ನು ಚೆನ್ನಾಗಿ ಜಗಿದು ತಿಂದು ನೀರು ಕುಡಿಯುವುದರಿಂದ ಕ್ರಮೇಣ ಚರ್ಮದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ.
ಬಿಲ್ವಪತ್ರೆ ಕಾಯಿಯನ್ನು ಬೆಂಕಿಯಲ್ಲಿ ಚೆನ್ನಾಗಿ ಸುಡಬೇಕು.. ನಂತರ ಅದರ ತಿರುಳನ್ನು ಮಂಡಿ ನೋವು ಇರೋ ಜಾಗಕ್ಕೆ ಹಚ್ಚಿದರೆ ಬೇಗನೆ ಮಂಡಿನೋವು ಕಮ್ಮಿ ಆಗುತ್ತೆ. ಚಳಿಗಾಲದಲ್ಲಿ ಆಗುವ ಜ್ವರ ನೆಗಡಿ, ಕೆಮ್ಮುಗೆ ಇದು ರಾಮಬಾಣ ಮೂರು ಎಲೆಗಳು ಮೆಣಸು ಶುಂಠಿ ಕೊತ್ತಂಬರಿ ಬೀಜ ಎಲ್ಲಾನು ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಸುಸ್ತು ಕೂಡ ಕಡಿಮೆಯಾಗುತ್ತದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,