ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೇಗುಳಿಯಲ್ಲಿ ವಾಸವಾಗಿದ್ದ ಬೋವಿ ವಡ್ಡರ್ ಸಮುದಾಯದವರಿಗೆ ಕಳೆದ ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರ ನೀಡುವುದನ್ನು ಸ್ಥಗಿತಗೊಳಿಸಿರುವ ಕಾರಣ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುವಂತಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಮುದಾಯದ ಹಲವರು ತಹಶೀಲ್ಧಾರರಿಗೆ ಮನವಿ ಸಲ್ಲಿಸಿದರು.
ಅಂಕೋಲಾ ತಾಲೂಕಿನ ಬಾಳೇಗುಳಿಯಲ್ಲಿ ಬೋವಿ ವಡ್ಡರ್ ಸಮುದಾಯದ ಹಲವಾರು ಕುಟುಂಬಗಳು ಅನೇಕ ದಶಕಗಳಿಂದ ಇಲ್ಲಿಯೇ ವಾಸ ಲಾಗಿದೆ. ಹಲವರು ಇಲ್ಲೇ ಹುಟ್ಟಿ ಬೆಳೆದಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಇವರು, ಹೆಚ್ಚಾಗಿ ಕೂಲಿ ಕೆಲಸ, ಕಟ್ಟಡ ಕೆಲಸ,ಕಲ್ಲು ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇಲ್ಲಿಯೇ ನೆಲೆಸಿ ಆಧಾರ ಕಾರ್ಡ್ , ಮೋಟರ ಕಾರ್ಡ, ಪಡಿತರ ಚೀಟಿ ಹೊಂದಿದವರೇ ಹೆಚ್ಚಿದ್ದರೂ ಅವರಿಗೆ ಈ ಹಿಂದಿನಂತೆ ಜಾತಿ ಪ್ರಮಾಣ ಪತ್ರ ಸಿಗದಿರುವುದರಿಂದ ಹಲವು ರೀತಿಯ ತೊಂದರೆ ಅನುಭವಿಸುವಂತಾಗಿದೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೊಂದುವ ಮೂಲಕ ಶಿಕ್ಷಣ, ಉದ್ಯೋಗ ಮೊದಲಾದ ಸೌಲಭ್ಯಗಳನ್ನು ಪಡೆಯುತ್ತ ಬಂದಿರುವ ಭೋವಿ ವಡ್ಡರ್ ಸಮುದಾಯದವರಿಗೆ ಅಂಕೋಲಾ ತಹಶೀಲ್ಧಾರರ ಕಾರ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಲಾಗಿದ್ದು,ಬೇರೆ ಯಾರದೋ ಪ್ರಕರಣವನ್ನು ಉದಾಹರಿಸಿ, ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಕಾರಣ ಹೇಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಮತ್ತಿತರ ಸೌಕರ್ಯಗಳನ್ನು ಪಡೆಯಲು ತೊಂದರೆ ಉಂಟಾಗಿದೆ ಸಂಬಂಧಿಸಿದವರು ಕೂಡಲೇ ಗಮನ ಹರಿಸಿ ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತ ಗಾಂವಕರ ಮಾತನಾಡಿ,ಬೇರೆ ತಾಲೂಕುಗಳಲ್ಲಿ ಈ ಸಮುದಾಯದವರಿಗೆ ಎಸ್ ಸಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು,ಅಂಕೋಲದಲ್ಲಿ ಮಾತ್ರ ಪ್ರಮಾಣ ಪತ್ರ ನೀಡದೇ ಹಲವರು ತೊಂದರೆ ಅನುಭವಿಸುವಂಥಗಿರುವುದು ಸರಿಯಲ್ಲ. ಸಂಬಂಧಿಸಿದವರು ಈ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ವಡ್ಡರ ಸಮುದಾಯದ ನ್ಯಾಯಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿರುವ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ, ಅಲಗೇರಿ ಭಾಗದ ಪ್ರಮುಖ ವಿನೋದ್ ಗಾಂವಕರ ಮಾತನಾಡಿ,ತಹಶೀಲ್ದಾರ್ ಅವರು ನೊಂದ ಕುಟುಂಬಗಳಿಗೆ ತ್ವರಿತವಾಗಿ ಸ್ಪಂದಿಸುವಂತಾಗಬೇಕೆಂದು ಆಗ್ರಹಿಸಿದರು.
ಉಪ ತಹಶೀಲ್ಧಾರ ಗಿರೀಶ್ ಜಾಂಬಾವಳಿಕರ್ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದರು ತಾಲೂಕಾ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ ಡಿ ನಾಯ್ಕ, ಪ್ರಮುಖರಾದ ನಾರಾಯಣ ನಾಯಕ, ಸುಬ್ಬಯ್ಯ , ವಡ್ಡರ ಸಮಾಜದ ರಾಘವೇಂದ್ರ ಭೋವಿ ,ರಾಜನ್ ಸೇಲ್ಬಸ್ವಾಮಿ , ಸುಭಾಸ ಸ್ವಾಮಿ,ರಾಮಾ ಸ್ವಾಮಿ ,ಕೃಷ್ಣ ಸ್ವಾಮಿ ,ಧನಲಕ್ಷ್ಮೀ ಸ್ವಾಮಿ , ಕವಿತಾ ಸ್ವಾಮಿ, ರುಕ್ಷ್ಮಿಣಿ, ಸಂಗೀತಾ, ಸರಸ್ಪತಿ, ಸುಧಾಕರ, ಮುರಳೀಧರ, ಪ್ರೇಮಾವತಿ, ರಾಜೇಶ, ಮನೋಜ ಮತ್ತಿತರ ದ್ದರು..
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ