ಕಾರವಾರ: ಪ್ರಧಾನ ಅಂಚೆ ಕಚೇರಿ ಹಾಗೂ ಅಂಚೆ ಅಧೀಕ್ಷಕರ ಹೊಸ ಕಟ್ಟಡದಲ್ಲಿ 2023-24 ಆರ್ಥಿಕ ವರ್ಷದ ಕಾರವಾರ ವಿಭಾಗದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಉತ್ತರ ಕರ್ನಾಟಕ ವಲಯ ಧಾರವಾಡದ IPPB ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ಜಗದೀಶ ಚಿಕ್ಕ ನರಗುಂದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ಧನಂಜಯ ಆಚಾರ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಬೋಟ್ ನಲ್ಲಿದ್ದ ಹೊರರಾಜ್ಯದ ಕಾರ್ಮಿಕ ನೀರು ಪಾಲು: ವಿಮಾನದ ಮೂಲಕ ಮೃತ ದೇಹ ಸಾಗಾಟ ?
ವೇದಿಕೆಯಲ್ಲಿ ಕಾರವಾರ ಅಂಚೆ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ ಶಿವಾನಂದ ರಬಕವಿ, ಕುಮಟಾ ಅಂಚೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಶ್ರೀ ಗಿರೀಶ್ ಕುಮಾರ್, ಹೊನ್ನಾವರ ಅಂಚೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಶ್ರೀ ಕೃಷ್ಣ ಸಂಕ್ರಟ್ಟಿ, ಕಾರವಾರ ಪ್ರಧಾನ ಅಂಚೆ ಕಚೇರಿ ಅಂಚೆ ಪಾಲಕರಾದ ಶ್ರೀ ಮಂಜುನಾಥ ಕೆ ಹಾಗೂ ಕುಮಟಾ ಪ್ರಧಾನ ಅಂಚೆ ಕಚೇರಿ ಅಂಚೆ ಪಾಲಕರಾದ ಶ್ರೀಮತಿ ಸಾವಿತ್ರಿ ಭಟ್ ಅವರು ಹಾಗೂ ಕಾರವಾರ IPPB ಮ್ಯಾನೇಜರ್ ಶ್ರೀ ಜೋಸ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಮಾಯಾ ಭಂಡಾರಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಉತ್ತರ ಕರ್ನಾಟಕ ವಲಯ ಧಾರವಾಡದ IPPB ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ಜಗದೀಶ ಚಿಕ್ಕ ನರಗುಂದ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕಾರವಾರ ಪ್ರಧಾನ ಅಂಚೆ ಕಚೇರಿ ಮಹಿಳಾ ಸಿಬ್ಬಂದಿಗಳು ಹಚ್ಚೇವು ಕನ್ನಡದ ದೀಪ ಸಮೂಹ ಗಾಯನ ನಡೆಸಿಕೊಟ್ಟರು. ಕುಮಟಾ ಅಂಚೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಶ್ರೀ ಗಿರೀಶ್ ಕುಮಾರ್ ಅವರು ಅಂಚೆ ಇಲಾಖೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು 4 ವಿಭಾಗದಲ್ಲಿ ಪ್ರಶಸ್ತಿ ನೀಡಲಾಯಿತು.
1.Account open 2. IPPB 3.PLI/RPLI 4.CSC ಈ 4 ವಿಭಾಗದಲ್ಲಿ ಸಾಧನೆ ಮಾಡಿದ ಕಾರವಾರ ವಿಭಾಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆಲವು ಸಾಧಕರು ತಮ್ಮ ಸಾಧನೆಯ ಕುರಿತು ಅನಿಸಿಕೆ ಹಂಚಿಕೊಂಡರು. ಶ್ರೀ ರಾಘವೇಂದ್ರ ಆಚಾರ್ಯ ಹಾಗೂ ಶ್ರೀಮತಿ ಜ್ಯೋತಿಕಾ ಇನಾಂದಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗಣನಾಥ ರಾಣೆ ಅವರು ಸ್ವಾಗತಿಸಿದರು, ಶ್ರೀ ಅವಿನಾಶ್ ಕಾಂಬ್ಳಿ ಅವರು ವಂದಿಸಿದರು. ನಂತರ ಅಂಚೆ ಸಿಬ್ಬಂದಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ