ಶಿರಸಿ: ತಾಲೂಕಿನ ಕೊರ್ಲಕಟ್ಟಾದ ಸಂದೀಪ ಬಸಪ್ಪ ಗೋಣುರು ಅವರು ನಗರದ ಮಾರಿಕಾಂಬಾ ದೇವಿಯ ದರ್ಶನಕ್ಕೆ ಬಂದ ಸಮಯದಲ್ಲಿ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಇದರ ಮಾಹಿತಿ ಪಡೆದ ನಗರ ಠಾಣೆಯ ಸಿಬ್ಬಂದಿ ಪ್ರದೀಪ್ ನಾಯ್ಕ ಕಳೆದು ಹೋದ ಮೊಬೈಲ್ ನ್ನು ಹುಡುಕಿ ಕೊಡುವಲ್ಲಿ ಯಶಸ್ವಿಯಾಗಿದ್ದು , ಅವರ ಕಾರ್ಯಕ್ಕೆ ಶಿರಸಿ ಉಪಭಾಗದ ಡಿಎಸ್ಪಿ ಗಣೇಶ ಕೆ.ಎಲ್, ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಹಾಗೂ ನಗರ ಠಾಣೆಯ ಪಿಎಸ್‌ಐ ನಾಗಪ್ಪ.ಬಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ