ಪ್ರಗತಿಪರ ಕೃಷಿಕ, ಯಕ್ಷಗಾನ ಕಲಾವಿದ ವೆಂಕಣ್ಣ ನಾಯಕ ವಿಧಿವಶ

ಅಂಕೋಲಾ : ತಾಲೂಕಿನ ಬಾಸಗೋಡ – ಶೀಳ್ಯದ ಹಿರಿಯ ನಾಗರಿಕರಾಗಿದ್ದ ವೆಂಕಟರಮಣ ನಾರಾಯಣ ನಾಯಕ ( 88 ) (ಶೀಳಿ ವೆಂಕಣ್ಣ ) , ಸೆ 28 ರ ನಸುಕಿನ ಜಾವ ವಿಧಿವಶರಾಗಿದ್ದಾರೆ.ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಇವರು ತಾವು ಸಹ ಕಷ್ಟಪಟ್ಟು ದುಡಿದು,ಕೃಷಿ ಮತ್ತು ಹೈನುಗಾರಿಕೆಯನ್ನೇ ಜೀವನಾಧಾರವನ್ನಾಗಿಸಿಕೊಂಡು,ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಬೆಳೆಸಿದ್ದರು.

ಮಣ್ಣಲ್ಲಿ ಮಣ್ಣಾದ ಅರ್ಜುನ್: ಕುಟುಂಬಸ್ಥರ ಆಕ್ರಂದನ : ಶೋಕ ಸಾಗರದ ಜೊತೆ ಜನಸಾಗರ

ತಮ್ಮ ಆತ್ಮೀಯ ವಲಯದಲ್ಲಿ ಹಿರಿ -ಕಿರಿಯರನ್ನದೇ ಎಲ್ಲರೊಳು ಒಂದಾಗಿ ಬೆರೆಯುತ್ತಾ,ತಮ್ಮ ಹಾಸ್ಯ ಶೈಲಿಯ ಮಾತುಗಾರಿಕೆಯ ಮೂಲಕ ಎಂಥವರ ಮನವನ್ನು ಸೂರೆಗೊಳ್ಳುತ್ತಿದ್ದರು. ಮುಪ್ಪಿನ ಕಾಲದಲ್ಲಿಯೂ ಲವ ಲವಿಕೆಯಿಂದ ಇದ್ದ ಇವರು,ತಮ್ಮ ಸರಳ ವ್ಯಕ್ತಿತ್ವದ ಮೂಲಕ ಪ್ರೀತಿ ಪಾತ್ರರಲ್ಲಿ ಶೀಳಿ ವೆಂಕಣ್ಣಣ್ಣ ಎಂದೆ ಕರೆಸಿಕೊಳ್ಳುತ್ತಿದ್ದರು. ಯಕ್ಷಗಾನ ರಂಗದಲ್ಲೂ ಮಿಂಚಿ ಕಲಾ ಸಾರ್ವಭೌಮ ಎನಿಸಿಕೊಂಡವರು.

ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಶೀಳ್ಯದಲ್ಲಿ ನೆರವೇರಿಸಲಾಯಿತು.ಸುತ್ತಮುತ್ತಲ ಹತ್ತಾರು ಹಳ್ಳಿಗಳ ಪ್ರಮುಖರು,ಕುಟುಂಬಸ್ಥರು ಸಂಬಂಧಿಗಳು, ಊರ ನಾಗರಿಕರು, ಮತ್ತಿತರರು ಅಗಲಿದ ಹಿರಿಯ ಜೀವಕ್ಕೆ ಅಂತಿಮ ನಮನ ಸಲ್ಲಿಸಿದರು.ಆರ್ ಟಿ ಮಿರಾಶಿ ನೇತೃತ್ವದ ಲಕ್ಷೇಶ್ವರ ಗೆಳೆಯರ ಬಳಗ ಸೇರಿದಂತೆ ಹಲವು ಪ್ರಮುಖರು ವೆಂಕಣ್ಣ ನಾಯಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version