ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಕ್ಯಾನ್ಯರ್ ವೈದ್ಯಕೀಯ ಜಾಗೃತ ಶಿಬಿರ ಕಾರ್ಯಕ್ರಮ

ಶಿರಸಿ: ಕ್ಯಾನ್ಸರ್ ಪೀಡಿತರು ವ್ಯತಿರಿಕ್ತವಾದ ಚಿಂತನೆಗೆ ಅವಕಾಶ ನೀಡದೇ, ಮಾನಸಿಕ ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆತ್ಮಸ್ಥೆರ್ಯ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಅಗತ್ಯ. ಅಲ್ಲದೇ ಕ್ಯಾನ್ಸರನ್ನು ಸಕರಾತ್ಮಕ ಮನೋಭಾವನೆಯಿಂದ ಏದುರಿಸುವ ಪ್ರವೃತ್ತಿಯ ಮನೋಭಾವನೆ ಹೊಂದುವoತವರಾಗಬೇಕೆoದು ಕೃಷ್ಣಿ ಶಿರೂರ, ಹಿರಿಯ ಪತ್ರಕರ್ತೆ, ಕ್ಯಾನ್ಸರ್ ರೋಗಿಗಳ ಆಪ್ತಸಮಾಲೋಚಕಿ, ಹುಬ್ಬಳ್ಳಿ ಇವರು ಹೇಳಿದರು.

ಅವರು ಇಂದು ಸ್ಪಂದನಾ ಗ್ರಾಮಿಣಾಭಿವೃದ್ಧಿ ವೇದಿಕೆ ಹಾಗೂ ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೋಸೈಟಿ ಲಿ. ಸಂಯುಕ್ತ ಆಶ್ರಯದಲ್ಲಿ, ಜಸ್ಟಿಸ್ ಕೆ.ಎಸ್ ಹೆಗ್ಗಡೆ, ಚಾರಿಟೇಬಲ್ ಹಾಸ್ಪಿಟಲ್, ಮಂಗಳೂರು ಇವರ ಸಹಯೋಗದೊಂದಿಗೆ ಶಿರಸಿಯ, ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ಕ್ಯಾನ್ಯರ್- ವೈಧ್ಯಕೀಯ ಜಾಗೃತ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಲಿನಂತೆ ಮಾತನಾಡಿದರು.

ಕ್ಯಾನ್ಸರ್ ರೋಗದ ಕುರಿತು ಸಾಮಾಜಿಕ ಧೋರಣೆ ಬದಲಾಗುವುದೊಂದಿಗೆ, ಮಾನಸಿಕ ಖಿನ್ನತೆಗೆ ಒಳಗಾದಲ್ಲಿ ಚಿಕಿತ್ಸೆ ಕೂಡ ರೋಗಿಗೆ ಸ್ಫಂದಿಸುವುದು ಕಷ್ಟ. ಯೋಗ, ಪ್ರಾಣಾಯಾಮ, ಧ್ಯಾನ, ಮುದ್ರೆಗಳು ರೋಗಿ ಗುಣಮುಖವಾಗಲು ಸಹಾಯವಾಗುವುದೆಂದು ಅವರು ಹೇಳಿದರು.

ಭಾರತದಲ್ಲಿ ಕಡಿಮೆ ವಯಸ್ಸಿನ ಯುವಕರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವುದು ವಿಷಾದಕರ. ಅಜ್ಞಾನ ಮತ್ತು ತಿಳುವಳಿಕೆಯ ಕೊರತೆಯಿಂದ ನಮ್ಮಲ್ಲಿ ರೋಗ ಉಲ್ಬಣಗೊಳ್ಳುವವರೆಗೂ ಕ್ಯಾನ್ಸರ್ ರೋಗ ಗುರುತಿಸಿಕೊಳ್ಳದಿರುವುದು ವಿಷಾದಕರ. ನೂರರಲ್ಲಿ ಮೂವತ್ತೆöÊದು ಕ್ಯಾನ್ಸರ್ ರೋಗಗಳು ತಂಬಾಕಿನ ಸೇವನೆಯಿಂದ ಬರುತ್ತಿದೆ. ಅತೀಯಾದ ಮಧ್ಯ ಸೇವನೆ, ತಂಬಾಕು ಸೇವನೆಯಿಂದ ಮುಕ್ತಿಗೊಂಡಲ್ಲಿ ಹಾಗೂ ಆಹಾರ ಪದ್ದತಿಯನ್ನ ನಿಯಂತ್ರಿಸುವಿಕೆಯಿAದ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯ ಎಂದು ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ|| ವಿನಯ್ ಕುಮಾರ್ ಜೆ ರಾಜೇಂದ್ರ, ಮಂಗಳೂರು ಅವರು ಶಿಬಿರದ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಾ ಹೇಳಿದರು.

ಚಿಕಿತ್ಸೆ ಮತ್ತು ಸಂವಾದ: ಜಿಲ್ಲಾದ್ಯಂತ ಆಗಮಿಸಿದ ಶಿಬಿರಾರ್ಥಿಗಳಿಂದ ಕ್ಯಾನ್ಸರ್‌ಗೆ ಸಂಬAಧಿಸಿದ ವೈಧ್ಯಕೀಯ ಸಮಸ್ಯೆಗಳ ಕುರಿತು ತಜ್ಞ ವೈಧ್ಯರೊಂದಿಗೆ ಸಂವಾದ ಏರ್ಪಟ್ಟವು. ತದನಂತರ ನೂರಾರು ಶಿಬಿರಾರ್ಥಿಗಳು ಚಿಕಿತ್ಸೆಗೆ ಒಳಪಟ್ಟಿದ್ದು ವಿಶೇಷವಾಗಿತ್ತು. ಶಿಬಿರದ ಅಧ್ಯಕ್ಷತೆಯನ್ನ ಸ್ಫಂದನಾ ಗ್ರಾಮೀಣಾಭಿವೃದ್ಧಿ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಸುರೇಶ್ ದೇಶಭಂಡಾರಿ, ಶೋಭಾ ನಾಯ್ಕ, ಶ್ರೀಕಲಾ ನಾಯ್ಕ, ಸಂದ್ಯಾ ನಾಯಕ, ನೇಹರೂ ಬಿಳೂರು, ಅನಸೂಯಾ ಸುರೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೋಸೈಟಿ ಲಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಭಂಡಾರಿ ವಂದನಾರ್ಪಣೆ ಮಾಡಿದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version