Follow Us On

Google News
Info News
Trending

Drumstick Leaves: ನುಗ್ಗೆಸೊಪ್ಪಿನ ಚಮತ್ಕಾರಿ ಆರೋಗ್ಯ ಗಣಗಳನ್ನು ನೋಡಿ?

ಸಾಮಾನ್ಯವಾಗಿ ಹಳ್ಳಿಕಡೆ ನುಗ್ಗೆಸೊಪ್ಪಿನ ಬಳಕೆ ಜಾಸ್ತಿ. ಈ ನುಗ್ಗೆಸೊಪ್ಪು ಅನೇಕ ಚಮತ್ಕಾರಿ ಆರೋಗ್ಯ ಗಣಗಳನ್ನು ಹೊಂದಿದೆ. ಹೃದಯದ ಸಮಸ್ಯೆ ಇದ್ದವರಿಗೆ ಇದು ಉತ್ತಮ ಆಹಾರವಾಗಿದ್ದು, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಿ, ಕಾಂತಿಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಬೇಕಿದ್ದವರೂ ಇದನ್ನು ಅಡುಗೆಯಲ್ಲಿ ಬಳಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ನುಗ್ಗೆಸೊಪ್ಪಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚುತ್ತದೆ. ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ತಮ್ಮ ವೈದ್ಯರನ್ನು ಸಂಪರ್ಕಿಸಿ, ಇಂತ ಆಹಾರವನ್ನು ಸೇವಿಸಬೇಕಿದೆ. ಕೆಲವರಿಗೆ ಗೆ ಇದು ಅಲರ್ಜಿಯನ್ನು ಉಂಟುಮಾಡಬಹುದು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button