ಅಂಕೋಲಾ: ಹತ್ತಾರು ವಿಧಾಯಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಮಂಗೇಶ ನಾಯ್ಕ ಮತ್ತು ಗೆಳೆಯರ ಬಳಗದ ಗೋ ಪ್ರೇಮಿಗಳ ಕುಟುಂಬದ ವತಿಯಿಂದ ತಾಲೂಕಿನ ಹಟ್ಟಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಟ್ಟಿಕೇರಿ-ಅವರ್ಸಾ-ಹಾರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಶಾಲೆಗಳ ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಈ ವಿಷಯದ ಮೇಲೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಪ್ರತೀಕ್ಷಾ ಪಿ ನಾಯ್ಕ ಹಟ್ಟಿಕೇರಿ (ಪ್ರಥಮ ಪ್ರಜ್ವಲ ವಿ ನಾಯ್ಕ (ದ್ವಿತೀಯ ), ಹಾಗೂ ಭಾವನಾ ಬಿ ನಾಯ್ಕ ಹಟ್ಟಿಕೇರಿ (ತೃತೀಯ ) ಸ್ಥಾನ ಪಡೆದು ಕೊಂಡರು. ನಿರ್ಣಾಯಕರಾಗಿ ಶಿಕ್ಷಕರಾದ ರಮೇಶ ಕಳ್ಳಿಮನಿ, ಸಂಜೀವ ನಾಯಕ, ರೇಷ್ಮಾ ನಾಯ್ಕ ಕಾರ್ಯ ನಿರ್ವಹಿಸಿದರು.
ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುರು ಡಿ ನಾಯ್ಕ ಉದ್ಘಾಟಿಸಿದರು. ಭಾಗವಹಿಸಿದ ಪ್ರತಿ ವಿದ್ಯಾರ್ಥಿಗಳಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಶಾಲೆಗಳಶ ಶಿಕ್ಷಕರು, ವಿದ್ಯಾರ್ಥಿ ಪಾಲಕರು. ಎಸ್ ಡಿ ಎಮ್ ಸಿ ಸದಸ್ಯರು. ಗೋ ಪ್ರೇಮಿ ಕುಟುಂಬದ ಸದಸ್ಯರು. ಊರ ನಾಗರಿಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ