ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠದ ಕೃಷಿ ಕ್ಷೇತ್ರಗಳನ್ನು ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇoದ್ರ ಸರಸ್ವತೀ ಮಹಾಸ್ವಾಮೀಜಿ ಅವರು, ಮಠದ ಅಡಿಕೆ ತೋಟ, ತೋಟದೊಳಗಿನ ಕಾಳು ಮೆಣಸು, ಅವುಗಳ ನಿರ್ವಹಣೆ ಕುರಿತು ವೀಕ್ಷಿಸಿದರು. ಅಲ್ಲದೆ, ಭತ್ತದ ಗದ್ದೆ, ಕಬ್ಬಿನ ಗದ್ದೆ ಓಡಾಟ ಮಾಡಿದರು. ಅಡಿಕೆ ತೋಟ, ಭತ್ತದ ಗದ್ದೆಗೆ ಆಗಬೇಕಾದ ಕಾರ್ಯಗಳನ್ನೂ ನೋಟ್ ಕೂಡ ಮಾಡಿಕೊಂಡರು. ಈ ವೇಳೆ ಕೃಷಿ ಸಮಿತಿಯ ಟಿ.ವಿ.ಹೆಗಡೆ, ಮಹಾಬಲೇಶ್ವರ ಹೆಗಡೆ ಗಡಿಕೈ ಇತರರು ಇದ್ದರು.
ವಿಸ್ಮಯ ನ್ಯೂಸ್, ಶಿರಸಿ