ಯಲ್ಲಾಪುರ: ಅಸಲಿ ಮಂಗಳಮುಖಿಯರು ನಕಲಿ ಮಂಗಳಮುಖಿಯ ಅಸಲಿಯತ್ತು ಬಯಲುಮಾಡಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ತೃತೀಯ ಲಿಂಗಿಗಳoತೆ ವರ್ತಿಸುತ್ತಿದ್ದ ವ್ಯಕ್ತಿಯನ್ನು ಇಬ್ಬರು ತೃತೀಯ ಲಿಂಗಿಗಳು, ಥಳಿಸಿ, ಬಣ್ಣ ಬಯಲು ಮಾಡಿದ್ದಾರೆ. ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಸೀರೆ ಧರಿಸಿ, ಮುಖಕ್ಕೆ ಬಣ್ಣ ಬಳಿದುಕೊಂಡು, ತೃತೀಯ ಲಿಂಗಿಗಳoತೆ ವರ್ತಿಸುತ್ತಾ, ಹಣಕೇಳುತ್ತಿದ್ದ.
ಇದನ್ನೂ ಓದಿ: ಬೃಹತ್ ನೇಮಕಾತಿ: 1,714 ಹುದ್ದೆಗಳು: SSLC ಆದವರು ಅರ್ಜಿ ಸಲ್ಲಿಸಬಹುದು: Apply Now
ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿಯೂ ವರ್ತಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಈತ ತೃತೀಯ ಲಿಂಗಿಯೇ ಅಲ್ಲ ಎಂಬ ಆರೋಪಗಳೂ ಸಹ ಕೇಳಿ ಬರುತ್ತಿತ್ತು. ವಿಷಯ ತಿಳಿದು ಪಟ್ಟಣಕ್ಕೆ ಆಗಮಿಸಿದ್ದ ಇಬ್ಬರು ಅಸಲಿ ಮಂಗಳಮುಖಿಯರು ಪಟ್ಟಣದ ಬಸ್ ನಿಲ್ದಾಣದಲ್ಲಿಯೇ ಈತ ಉಟ್ಟಿದ್ದ ಸೀರೆಯನ್ನು ಹರಿದು ಹಾಕಿ, ಈತ ತೃತೀಯ ಲಿಂಗಿಯೇ ಅಲ್ಲ ಎಂಬುದನ್ನು ಸಾಬೀತು ಪಡಿಸಿರುತ್ತಾರೆ.
ವಿಸ್ಮಯ ನ್ಯೂಸ್, ಯಲ್ಲಾಪುರ