ಕುಮಟಾ: ಇಲ್ಲಿಯ ರೋಟರಿಯ ನಾದಶ್ರೀ ಕಲಾಕೇಂದ್ರದ ಹೊರಾಂಗಣದಲ್ಲಿ ರೋಟರಿ ಕ್ಲಬ್ ವತಿಯಿಂದ 77ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣಗೈದು ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಎನ್. ಆರ್. ಗಜು ‘ನಾವು ಸಹಾನುಭೂತಿ ಮತ್ತು ಸಹಾನುಭೂತಿಯ ಮನೋಭಾವವನ್ನು ಬೆಳೆಸಿಕೊಳ್ಳೋಣ. ಅಗತ್ಯವಿರುವವರಿಗೆ ಬೆಂಬಲ ನೀಡೋಣ ಮತ್ತು ಯಾರೂ ಹಿಂದುಳಿದಿಲ್ಲವೆoದು ಖಚಿತಪಡಿಸಿಕೊಳ್ಳುವತ್ತ ದೃಢ ಮನಸ್ಸನ್ನಿಡೋಣ. ನಮ್ಮ ಭಾರತವು ತಂತ್ರಜ್ಞಾನ, ನಾವಿನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ರೋಟರಿಯ ಏಳು ಸೇವಾಕ್ಷೇತ್ರಗಳಾದ ಶಾಂತಿ ನಿರ್ಮಾಣ, ಸಂಘರ್ಷ ತಡೆಗಟ್ಟುವಿಕೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ನೀರು, ನೈರ್ಮಲ್ಯ, ತಾಯಿ ಮತ್ತು ಮಗುವಿನ ಆರೋಗ್ಯ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಮುದಾಯದ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಪಾತ್ರವೂ ಇದೆ’ ಎಂದು ಹೆಮ್ಮೆಯಿಂದ ನುಡಿದರು.
‘ವೈವಿಧ್ಯತೆಯಲ್ಲಿ ಏಕತೆ ಎಂಬುದು ನಮ್ಮಲ್ಲಿಯ ವಿಶೇಷತೆಯಾಗಿದೆ. ಎಲ್ಲರೂ ಒಟ್ಟಿಗಿರಬೇಕು. ಜಗತ್ತಿಗೆ ಹೊಸ ಭರವಸೆಯನ್ನು ಬಿತ್ತುತ್ತಲೇ ರಾಷ್ಟç ನಿರ್ಮಾಣಕ್ಕೆ ಕೈಜೋಡಿಸೋಣ’ ಎಂದು ರೋಟರಿಯ ಸಹಾಯಕ ಪ್ರಾಂತಪಾಲ ವಸಂತ ರಾವ್ ಅಭಿಪ್ರಾಯ ಹಂಚಿಕೊoಡರು. ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ಗೌರವದ ರಕ್ಷೆ ನೀಡಿ, ಧ್ವಜ ಗೀತೆ ನಿರೂಪಿಸಿದರು. ಈ ಸಂದರ್ಭದಲ್ಲಿ ಕೋಶಾಧ್ಯಕ್ಷ ಸಂದೀಪ ನಾಯಕ ರೊಟೇರಿಯನ್ನರಾದ ಡಾ.ಡಿ.ಡಿ.ನಾಯಕ, ಎಂ.ಬಿ.ಪೈ, ಡಾ.ಸಚಿನ್ ನಾಯಕ, ಎಸ್.ವಿ.ಹೆಗಡೆ ನಂದೈಯನ್, ಸತೀಶ ನಾಯ್ಕ, ಸುರೇಶ ಭಟ್, ಡಾ.ನಮೃತಾ ಶಾನಭಾಗ, ಮೌಸ್ಹಿನ್ ಖಾಜಿ, ಚೇತನ ಶೇಟ್, ಅತುಲ್ ಕಾಮತ, ಕಿರಣ ನಾಯಕ, ಶಿಲ್ಪಾ ಜಿನರಾಜ್, ಜಿನರಾಜ್ ಜೈನ್, ಸುಜಾತಾ ಕಾಮತ, ಡಾ.ವಾಗೀಶ್ ಭಟ್, ಡಾ.ಶ್ರೀದೇವಿ ಭಟ್, ಯೋಗೇಶ್ ಕೋಡ್ಕಣಿ, ಡಾ.ನಿತಿಶ್ ಶಾನಭಾಗ, ವಸಂತ ಶಾನಭಾಗ, ಸಿಎ ವಿನಾಯಕ ಹೆಗಡೆ, ನಿಖಿಲ್ ಕ್ಷೇತ್ರಪಾಲ, ಪ್ರಣವ್ ಮಣಕೀಕರ, ಅನೆಟ್ ಗಣೇಶ ನಾಯ್ಕ, ಅನೆಟ್ ಧ್ಯಾನ, ಅನೆಟ್ ರೀಷಾ, ಶೇಖರ ಕುಮಟಾಕರ ಮೊದಲಾದವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಕುಮಟಾ