ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳ್ಕೂರ ನೀಲಗೋಡ ಯಕ್ಷಿ ಚೌಡೇಶ್ವರಿ ದೇವಿಯು ಈ ಭಾಗದ ಶಕ್ತಿ ಪೀಠಗಳಲ್ಲಿ ಒಂದು. ಈ ಕ್ಷೇತ್ರ ಅತ್ಯಂತ ಕ್ಷೀಪ್ರಗತಿಯಲ್ಲಿ ಭಕ್ತರ ಮನಸನ್ನು ಸೇಳದಿರುವ ಕ್ಷೇತ್ರ, ಇಲ್ಲಿಗೆ ಬರುವ ಭಕ್ತರ ಮನೋಭಿಲಾಶೆಯನ್ನು ಇಡೇರಿಸುತ್ತಾ ಸಂಕಷ್ಟಗಳನ್ನು ದೂರಮಾಡುತಾ ನಿಸರ್ಗ ಮಡಿಲಿನಲ್ಲಿ ನೇಲೆ ನಿಂತಿದಾಳೆ ದೇವಿ. ಇಲ್ಲಿ ಅಮವಾಸೆಯ ದಿನದಂದು ತೀರ್ಥ ಸ್ಥಾನ ವಿಷೇಶ ವಾಗಿದೆ, ದೇವಾಲಯದಲ್ಲಿ ಪ್ರತಿ ಅಮವಾಸೆಯಂದು ಲೋಕ ಕಲ್ಯಾಣಾರ್ಥವಾಗಿ ನವ ಚಂಡಿಕಾಯಾಗವು ಮಾದೇವ ಸ್ವಾಮೀಯವರ ಮುಂದಾಳತ್ವದಲ್ಲಿ ವೈದಿಕರ ಮೂಲಕ ನಡೆಯುತ್ತದೆ,
ಅಮವಾಸೆಯ ಹಿನ್ನಲೆಯಲ್ಲಿ ಐದು ಸಾವಿರಕ್ಕು ಹೆಚ್ಚು ಭಕ್ತರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿ ದೇವಿಗೆ ಉಡಿಸೇವೆ, ತುಪ್ಪದದೀಪ ಸೇವೆ, ಹೂವಿನ ಅಲಂಕಾರ ಸೇವೆ, ಹಣ್ಣುಕಾಯಿ ಸೇವೆ, ಅನ್ನದಾನ ಸೇವೆ, ನವ ಚಂಡಿಕಾ ಸೇವೆ, ಸಲ್ಲಿಸಿದರು. ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಪ್ರಸಾದವಿತರಣೆ ಅನ್ನಸಂತರ್ಪಣೆ ನಡೆದವು, ಸಾವಿರಾರು ಸಂಖೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ