Follow Us On

Google News
Focus News
Trending

ದೇವರಾಜ ಅರಸು: ವಿವಿಧೆಡೆ ಜನ್ಮದಿನಾಚರಣೆ: ಸಾಧಕ ವಿದ್ಯಾರ್ಥಿಗಳಿಗೆ ಗೌರವ

ಹೊನ್ನಾವರ: ತಾಲೂಕ ಅಡಳಿತ ಹೊನ್ನಾವರ ಹಾಗೂ ವಿವಿಧ ಇಲಾಖೆಯ ಸಂಯುಕ್ತ ಅಶ್ರಯದಲ್ಲಿ ದೇವರಾಜ ಅರಸು ರವರ ಜನ್ಮದಿನಾಚರಣೆಗೆ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ದೀಪ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಹಿಂದುಳಿದ ವರ್ಗ ಹಾಗೂ ದಲಿತರ ಧ್ವನಿಯಾಗಿ ದೇವರಾಜ ಅರಸು ರವರ ಕೊಡುಗೆ ಸ್ಮರಣಿಯವಾಗಿದೆ, 40 ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಕೊಡುಗೆ ನೀಡಿದ್ದಾರೆ ಎಂದರು.

ಉಪನ್ಯಾಸಕರಾದ ನಾಗರಾಜ ಹೆಗಡೆ ಅಪಗಾಲ ಮಾತನಾಡಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಂಡ ಧೀಮಂತ ನಾಯಕ ಅರಸು ಅವರಾಗಿದ್ದರು. ಹಿಂದುಳಿದ ವರ್ಗದ ಧ್ವನಿಯಾಗಿ ಶಾಸನ ಸಭೆಯಲ್ಲಿ ಪ್ರತಿನಿಧಿಸಿದರು.ಭೂಸುಧಾರಾಣೆಯ ಹರಿಕಾರರಾಗಿ, ಉಳುವವನೆ ಭೂಮಿ ಒಡೆಯಾ, ಭೂ ನ್ಯಾಯ ಮಂಡಳಿಯoತಹ ಅನೇಕ ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ ಎಂದರು.
ಇದೆ ವೇಳೆ ಕ್ರೀಡೆ ಹಾಗೂ ಸಹಪಠ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಸತಿನಿಲಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ರವಿರಾಜ್ ದಿಕ್ಷೀತ್ ವಹಿಸಿದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button