Focus News
Trending

ಎಸ್.ಎಸ್.ಎಲ್.ಸಿ ಯಲ್ಲಿ ‘ಎ’ ಗ್ರೇಡ್ ಫಲಿತಾಂಶ ದಾಖಲಿಸಿದ ಅಂಕೋಲಾ

ಶ್ರೇಣಿಯಾಧಾರಿತ ಹೊಸ ಪದ್ಧತಿಗೊಳಪಟ್ಟ ಎಲ್ಲಾ 29ಶಾಲೆಗಳ ಫಲಿತಾಂಶ
ಎ ಗ್ರೇಡ್ ಫಲಿತಾಂಶ

[sliders_pack id=”3491″]

ಅಂಕೋಲಾ : ಕರಾವಳಿಯ 5 ತಾಲೂಕುಗಳನ್ನೊಳಗೊಂಡ ಕಾರವಾರ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಂಕೋಲಾ ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ‘ಎ’ ಗ್ರೇಡ್ ಫಲಿತಾಂಶ ದಾಖಲಿಸಿದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಶ್ರೇಣಿಯಾಧಾರಿತ ಹೊಸ ಪದ್ಧತಿ : ಪರೀಕ್ಷೆ ಬರೆದ ಒಟ್ಟೂ ವಿದ್ಯಾರ್ಥಿಗಳಲ್ಲಿ ಪಾಸಾದವರೇಷ್ಟು ಎಂಬ ಆಧಾರದ ಮೇಲೆಯೇ ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಆಯಾ ಶಾಲೆ-ತಾಲೂಕು-ಜಿಲ್ಲಾವಾರು ಫಲಿತಾಂಶ ಪ್ರಮಾಣವನ್ನು ಶೇಕಡಾವಾರು ಲೆಕ್ಕದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.
ಆದರೆ ಪರಿಷ್ಕøತ ಹೊಸ ಪದ್ಧತಿಯಂತೆ ಪರೀಕ್ಷೆಗೆ ಕುಳಿತ ಒಟ್ಟೂ ವಿದ್ಯಾರ್ಥಿಗಳಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆಯನ್ನಷ್ಟೇ ಗಣನೆಗೆ ತೆಗೆದುಕೊಳ್ಳದೇ, ಪಾಸಾದ ವಿದ್ಯಾರ್ಥಿಗಳ ಅಂಕ ಗಳಿಕೆ ಸಾಮಥ್ರ್ಯ ಆಧರಿಸಿ ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡಲಾಗಿದೆ. ಈ ಮೂಲಕ ಹೊಸ ಶ್ರೇಣಿ (ಗ್ರೇಡ್) ಆಧಾರಿತ ನೂತನ ಪದ್ಧತಿ ಜಾರಿಗೊಳಿಸಲಾಗಿದೆ.

ಮಾನದಂಡ : ವಿದ್ಯಾರ್ಥಿಗಳ ಒಟ್ಟೂ ಉತ್ತೀರ್ಣತೆ ಪ್ರಮಾಣಕ್ಕೆ ಶೇ.40, ವಿದ್ಯಾರ್ಥಿಗಳ ಸರಾಸರಿ ಅಂಕ ಗಳಿಕೆ ಪ್ರಮಾಣಕ್ಕೆ ಶೇ. ಮತ್ತು ಉಳಿದ 20 ಶೇ.ವನ್ನು ಪಾಸಾದ ವಿದ್ಯಾರ್ಥಿಗಳ ಪೈಕಿ ಎಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂಬ ಅಂಕಿ-ಅಂಶಗಳನ್ನು ಕ್ರೋಢಿಕರಣಗೊಳಿಸಿ ನಿರ್ಧರಿಸಲಾಗುತ್ತದೆ.

ವರ್ಗೀಕರಣ : ಮಾನದಂಡದ ಪ್ರಕಾರ ಶೇ.85ಕ್ಕಿಂತ ಹೆಚ್ಚು ಫಲಿತಾಂಶ ಪಡೆದಲ್ಲಿ ‘ಎ’ ಗ್ರೇಡ್, ಶೇ.65ರಿಂದ 85 ಫಲಿತಾಂಶ ದಾಖಲಿಸಿದ್ದಲ್ಲಿ ‘ಬಿ’ ಗ್ರೇಡ್ ಮತ್ತು ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಲ್ಲಿ ‘ಸಿ’ ಗ್ರೇಡ್ ಎಂದು ವರ್ಗೀಕರಣ ಮಾಡಲಾಗುತ್ತದೆ.

ತಾಲೂಕಿನ ಒಟ್ಟೂ 29 ಪ್ರೌಢಶಾಲೆಗಳಲ್ಲಿ 16ಶಾಲೆಗಳು ‘ಎ’ ಗ್ರೇಡ್ ನಲ್ಲಿಯೂ, 11ಶಾಲೆಗಳು ‘ಬಿ’ ಗ್ರೇಡ್ ನಲ್ಲಿಯೂ ಮತ್ತು 2ಶಾಲೆಗಳು ‘ಸಿ’ ಗ್ರೇಡ್‍ನಲ್ಲಿ ಗುರುತಿಸಿಕೊಂಡಿದೆ. ಹೆಸರಿಗೆ ತಕ್ಕಂತೆ ಅಂಕೋಲಾದ ಮೊದಲಕ್ಷರವೂ ‘ಎ’ ಆಗಿದ್ದು ತಾಲೂಕಿನ ಒಟ್ಟಾರೆ ಫಲಿತಾಂಶವೂ ‘ಎ’ ಗ್ರೇಡ್ ಆಗಿದೆ.

  • ಅಂಕೋಲಾದ ಸರ್ಕಾರಿ ಪ್ರೌಢಾಶಾಲೆಗಳಲ್ಲಿ 7ಶಾಲೆಗಳು ‘ಎ’ ಗ್ರೇಡ್ 5ಶಾಲೆಗಳು ‘ಬಿ’ ಗ್ರೇಡ್ ಅನುದಾನಿತ 5ಶಾಲೆಗಳು ‘ಎ’ ಗ್ರೇಡ್, 6ಶಾಲೆಗಳು ‘ಬಿ’ ಗ್ರೇಡ್, 2ಶಾಲೆಗಳು ‘ಸಿ’ ಗ್ರೇಡ್ ಪಡೆದಿವೆ.4 ಖಾಸಗಿ ಶಾಲೆಗಳು ‘ಎ’ ಗ್ರೇಡ್ ಪಡೆದು ಗಮನ ಸೆಳೆದಿವೆ.

ಟಾಪ್ 10 : ತಾಲೂಕಿನ ಟಾಪ್ 10 ಪಟ್ಟಿಯಲ್ಲಿ ಅವರ್ಸಾದ ಜೆ.ಸಿ ಶಾಲೆ ಅಗ್ರಸ್ಥಾನ ಗಳಿಸಿದ್ದು, ಉಳಿದಂತೆ ನಿರ್ಮಲಾ ಹೃದಯ ಪ್ರೌಢಶಾಲೆ, ಅಚವೆಯ ಸರ್ಕಾರಿ ಪ್ರೌಢಶಾಲೆ ಮತ್ತು ಜೈಹಿಂದ್ ಹೈಸ್ಕೂಲ್ ವಿದ್ಯಾರ್ಥಿ ಸೇರಿ ಹಲವು ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ತೋರ್ಪಡಿಸಿದ್ದಾರೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಕರೊನಾ ಸೋಂಕಿನ ಭೀತಿಯ ನಡುವೆಯೇ ಜೂನ್ 25ರಿಂದ ಆರಂಭಗೊಂಡು ಜುಲೈ 3ರಂದು ಸುಸೂತ್ರವಾಗಿ ಮುಗಿದಿದ್ದ 10ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರ ಶ್ರಮ ಮತ್ತು ಕುತೂಹಲಕ್ಕೆ ಉತ್ತರ ದೊರೆತಂತಾಗಿದೆ. ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮನದುಂಬಿ ಹಾರೈಸುವ ಜೊತೆ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸೋಣ. ಅನಿವಾರ್ಯ ಕಾರಣಗಳಿಂದ ಅನುತೀರ್ಣರಾದ ವಿದ್ಯಾರ್ಥಿಗಳು ಮರು ಪರೀಕ್ಷೆಯಲ್ಲಿ ಯಶಸ್ಸು ಕಾಣುವಂತಾಗಲಿ ಎಂದು ಸ್ಪೂರ್ತಿ ತುಂಬಿ ಅವರ ಆತ್ಮಸ್ಥೈರ್ಯ ಹೆಚ್ಚಿಸೋಣ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button