ಹೊನ್ನಾವರ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ವೇಳೆ ಸಂಶಯಾಸ್ಪದವಾಗಿ ( Suspicious Death) ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತಪಟ್ಟ ಯುವಕ ಹೊನ್ನಾವರ ಪಟ್ಟಣದ ಗಾಂಧಿನಗರ ನಿವಾಸಿ ಮಹಮ್ಮದ್ ಇಬ್ರಾಹಿಂ ಆಸೀಫ್ (33) ಎಂದು ತಿಳಿದುಬಂದಿದೆ. ಈತ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿoದ ಆಗಸ್ಟ್ 18ರಂದು ಸಂಜೆ ಪಟ್ಟಣದ ಶ್ರೀದೇವಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ.
ಆಸ್ಪತ್ರೆಯವರು ಮೂತ್ರಪಿಂಡದಲ್ಲಿ ಕಲ್ಲುಗಳು ಇದ್ದ ಕುರಿತು ತಿಳಿಸಿ ಆಸ್ಪತ್ರೆ ಯಲ್ಲಿ ದಾಖಲಾಗುವಂತೆ ಹೇಳಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆಗಸ್ಟ್ 20 ರಂದು ಲೇಸರ್ ಚಿಕಿತ್ಸೆಯನ್ನು ನೀಡುವುದಾಗಿ ವೈದ್ಯರು ತಿಳಿಸಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ಆಪರೇಷನ್ ಕರೆದೊಯ್ದು ಮಧ್ಯಾಹ್ಯ 12 ಗಂಟೆ ಸುಮಾರಿಗೆ ಲೇಸರ್ ಚಿಕಿತ್ಸೆ ನೀಡಿ ವಾರ್ಡ್ಗೆ ಕರೆತರಲಾಗಿತ್ತು. ಆಗ ಸ್ವಲ್ಪ ಅಸ್ವಸ್ಥ ರೀತಿಯಲ್ಲಿ ಇದ್ದು ವೈದ್ಯ ರು ಚಿಕಿತ್ಸೆ ಯನ್ನು ಮುಂದುವರಿಸಿದ್ದು ಆಗಸ್ಟ್ 23 ರಂದು ಆತನ ಆರೋಗ್ಯ ದಲ್ಲಿ ಏರುಪೇರು ಕಂಡು ಬಂದಿರುವುದರಿoದ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆ ವೈದ್ಯ ರ ಸಲಹೆಯಂತೆ ಉಡುಪಿ ಮಣಿಪಾಲ್ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿತ್ತು..
ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆ ಗೆ ದಾಖಲಿಸಿದಾಗ ಅಲ್ಲಿಯ ವೈದ್ಯರು ರೋಗಿಯು ಈಗಾಗಲೇ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ. ನನ್ನ ಗಂಡನ ಸಾವಿನಲ್ಲಿ ಸಂಶಯವಿದ್ದು, (Suspicious Death) ಈ ಕುರಿತು ಸೂಕ್ತ ಕಾನೂನಿನಂತೆ ತನಿಖೆ ನಡೆಸಿ ಗಂಡನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮೃತನ ಪತ್ನಿ ಸುಮಯ್ಯ ಮಹಮ್ಮದ್ ಆಸೀಪ್ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಸಾಯಂಕಾಲ ಆಂಬುಲೆನ್ಸ ಮೂಲಕ ಮೃತದೇಹ ಬರುವಾಗ ಶರಾವತಿ ಸೇತುವೆ ಬಳಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾವಣೆಗೊಂಡು ಆಸ್ಪತ್ರೆಯ ಮೇಲೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಸ್ತೆ ತಡೆಯಲು ಮುಂದಾಗುತ್ತಿದ್ದoತೆ ಪೊಲೀಸರು ತಿಳಿ ಹೇಳಿದರು. ನಂತರ ಪೊಲೀಸ್ ಠಾಣಾ ಮುಂಭಾಗದವರೆಗೆ ಮೆರವಣೆಗೆ ನಡೆಸಿದರು. ಪೊಲೀಸ್ ಬಿಗಿ ಬಂದವಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ ಪಿ ಶ್ರೀಕಾಂತ ಸಿಪಿಐ ತಿಮ್ಮಪ್ಪ ನಾಯ್ಕ, ಹೊನ್ನಾವರ, ಮಂಕಿ, ಕುಮಟಾ ತಾಲೂಕಿನ ಸಿಬ್ಬಂದಿಗಳು ಇದ್ದರು. ವೈದ್ಯರ ಅಚಾತುರ್ಯದಿಂದ ರೋಗಿ ಸಾವನ್ನಪ್ಪಿದ್ದಾನೆಯೇ? ಅಥವಾ ಇನ್ಯಾವ ಕಾರಣದಿಂದ ಮೃತಪಟ್ಟಿದ್ದಾನೆ? ಎಂಬ ಸತ್ಯ ತನಿಖೆಯ ನಂತರ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ