ಅಂಕೋಲಾ: ಅರ್ಗಾದ ಸೀಬರ್ಡ್ ನೌಕಾನೆಲೆ ವ್ಯಾಪ್ತಿ ಪ್ರದೇಶದಿಂದ ಅಕ್ರಮವಾಗಿ ಗೋವುಗಳನ್ನು Cattle Smuggling ಲಾರಿಯಲ್ಲಿ ಕದ್ದು ಸಾಗಿಸುತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ, ಸ್ಥಳೀಯರು ಮತ್ತು ಗೋ ಪ್ರೇಮಿ ಸಂಘಟನೆಗಳ ಪದಾಧಿಕಾರಿಗಳು ಲಾರಿಯನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ 18 ಗೋವುಗಳನ್ನು ರಕ್ಷಿಸಲಾಗಿದ್ದು, ಗೋವುಗಳನ್ನು ಸಾಗಿಸುತ್ತಿದ್ದ 5 ಜನ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ.
ನೌಕಾನೆಲೆ ಯೋಜನಾ ಪ್ರದೇಶದಿಂದ ನಕಲಿ ಪರವಾಗಿ ಪತ್ರದೊಂದಿಗೆ 18 ಗೋವುಗಳನ್ನು Cattle Smuggling ಲಾರಿಯಲ್ಲಿ ಕಲಬುರ್ಗಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು, ಚೆಂಡಿಯಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಂಕೋಲಾ ಗೋ ಪ್ರೇಮಿಗಳ ಸಂಘದ ಸದಸ್ಯರು ಲಾರಿಯನ್ನು ತಡೆದು ಗೋವುಗಳನ್ನು ರಕ್ಷಣೆ ಮಾಡಿದ್ದು, ಅವರ ಈ ಕಾರ್ಯಕ್ಕೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.
ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಪೊಲೀಸ್ ಠಾಣೆ ಎದುರು ಜಮಾಯಿಸಿದ ಗೋ ಪ್ರೇಮಿಗಳು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ, ಅಕ್ರಮ ಗೋ ಸಾಗಾಟ ಜಾಲದ ಬಾಲ ಕತ್ತರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಪೋಲೀಸರಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ