Kickboxing Championship: ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್  ಸ್ಪರ್ಧೆ: ಒಂದು ಚಿನ್ನ & ಎರಡು ಕಂಚಿನ ಪದಕ

ರಾಂಚಿಯಲ್ಲಿ ನಡೆದ ಜೂನಿಯರ್ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್  ಸ್ಪರ್ಧೆಯಲ್ಲಿ ( Kickboxing Championship) ಉತ್ತರಕನ್ನಡ ಜಿಲ್ಲೆ, ಒಂದು ಚಿನ್ನ ಮತ್ತು ಎರಡು ಕಂಚಿನ ಪದಕ ಪಡೆದುಕೊಂಡಿದೆ. ಜಾರ್ಖಂಡ್ ರಾಜ್ಯದ ರಾಂಚಿಯ ಹರಿವಂಶ ತಾಣ ಭಗತ್ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದೇಶದ 32 ರಾಜ್ಯಗಳಿಂದ 3200 ಕಿಕ್ ಬಾಕ್ಸಿಂಗ್ ಪಟುಗಳು ಭಾಗವಸಿದ್ದರು.

ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ   ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜೂನಿಯರ್ ಕಿಕ್ ಬಾಕ್ಸಿಂಗ್ ( Kickboxing Championship) ಪಟುಗಳಾದ ಮಹಮ್ಮದ್ ಯುಷಾ 13 ರಿಂದ 15 ವಯೋಮಿತಿಯ ಪಾಯಿಂಟ್ ಪೈಟಿಂಗ್ -57kg ವಿಭಾಗದಲ್ಲಿ  ಚಿನ್ನದ ಪದಕವನ್ನು  ಪಡೆದುಕೊಂಡಿದ್ದಾನೆ . ಮತ್ತು ಧನ್ವಿತಾ ವಾಸು ಮೊಗೇರ 18 ಕೆಜಿ ವಿಭಾಗ ಹಾಗೂ ಆಧ್ಯಾ ರವಿ ನಾಯ್ಕ 24 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅದೇ ರೀತಿ ಹುಡುಗಿಯರ ಪಾಯಿಂಟ್ ಪೈಟಿಂಗ್  -46kg ವಿಭಾಗದಲ್ಲಿ ಲಿಖಿತಾ ಶಂಕರ ನಾಯ್ಕ 9ನೇಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ಈ ಎಲ್ಲಾ ಪಟುಗಳಿಗೆ ವಾಕೊ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ನ ಅಧ್ಯಕ್ಷರಾದ ಸಂತೋಷ ಕೆ ಮತ್ತು ಪ್ರಧಾನ ಕಾರ್ಯದರ್ಶಿಯಾದ ಪೂಜಾ ಹರ್ಷ ಹಾಗೂ  ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗಿನ ಕೋಚ್  ಹರ್ಷ ಶಂಕರ್  ಉತ್ತರಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಈಶ್ವರ ನಾಯ್ಕ ಮತ್ತು  ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ನ ಕೋಚ್ ರಾದ   ನಾಗಶ್ರೀ ನಾಯ್ಕ ಮತ್ತು ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ನ ಕೋಚ್ ರಾದ  ಇಸ್ಮಾಯಿಲ್ ಅಭಿನಂದನೆ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version