
ತಾಲೂಕಿನಲ್ಲಿ ಇಂದು 10 ಪ್ರಕರಣ ದೃಢ
ಬಾಡ, ಕೂಜಳ್ಳಿ, ಧಾರೇಶ್ವರ, ಅಳ್ವೆಕೋಡಿ, ವಿವೇಕನಗರ, ವನ್ನಳ್ಳಿ, ಗೋಕರ್ಣದಲ್ಲಿ ಸೋಂಕು ಪತ್ತೆ
ಕುಮಟಾ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಇಂದು ಕೂಡ 10 ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.ತಾಲೂಕಾ ವ್ಯಾಪ್ತಿಯ ಬಾಡ, ಕೂಜಳ್ಳಿ, ಧಾರೇಶ್ವರ, ಅಳ್ವೆಕೋಡಿ, ವಿವೇಕನಗರ, ವನ್ನಳ್ಳಿ, ಗೋಕರ್ಣ ಮುಂತಾದ ಭಾಗಗಳಲ್ಲಿ ಇಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.
ಕೂಜಳ್ಳಿಯ 26 ವರ್ಷದ ಯುವತಿ, ಬಾಡದ 37 ವರ್ಷದ ಪುರುಷ, ವನ್ನಳ್ಳಿಯ 70 ವರ್ಷದ ವೃದ್ಧ, ಗೋಕರ್ಣದ 63 ವರ್ಷದ ಪುರುಷ, ಕುಮಟಾದ 26 ವರ್ಷದ ಯುವತಿ, 39 ವರ್ಷದ ಪುರುಷ, ವಿವೇಕನಗರದ 86 ವರ್ಷದ ವೃದ್ಧ, ಧಾರೇಶ್ವರದ 27 ವರ್ಷದ ಯುವತಿ, ಧಾರೇಶ್ವರದ 27 ವರ್ಷದ ಯುವಕ, ಅಳ್ವೆಕೋಡಿಯ 42 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಇಂದು ದೃಢಪಟ್ಟ 14 ಕರೊನಾ ಸೋಂಕಿತರು ಕೂಡ ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಬಂದವರಲ್ಲವಾಗಿದ್ದು, ಈ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾರ್ಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಇವರ ವರದಿಯೂ ಸಹ ಪಾಸಿಟಿವ್ ಬಂದಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.