ಮಾಹಿತಿ
Trending

ಅನುಮಾನಾಸ್ಪದ ರೀತಿಯಲ್ಲಿ ಹಸುವಿನ ಮೃತದೇಹ ಪತ್ತೆ

[sliders_pack id=”3498″]

ಕುಮಟಾ: ತಾಲೂಕಿನ ಅಳ್ವೆಕೋಡಿಯ ಕೊಬ್ಬರಿ ಫ್ಯಾಕ್ಟರಿ ಬಳಿ ಅನುಮಾನಾಸ್ಪದ ರೀತಿಯಲ್ಲಿ ಹಸು ಮೃತಪಟ್ಟಿದೆ.

ಸಂಜೆ 6.30ರ ಸಮಯಕ್ಕೆ ಸಾವನ್ನಪ್ಪಿದ ಹಸು ಸ್ಥಳೀಯರ ಕಣ್ಣಿಗೆ ಬಿದ್ದು, ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದರು. ಮಾರುತಿ ದೇವಸ್ಥಾನದ ಹಿಂಬದಿಯ ಗದ್ದೆಯಲ್ಲಿ ಹಸು ಬಿದ್ದುಕೊಂಡಿದ್ದು,ರಸ್ತೆಯಿಂದ ಸುಮಾರು ೫೦ ಮೀ ದೂರದಲ್ಲಿ ಎಳೆದು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.ಉದ್ದೇಶಪೂರ್ವಕವಾಗಿಯೇ ಸಾಯಿಸಲಾಗಿದೆಯೋ ಅಥವಾ ಸತ್ತ ಹಸುವನ್ನು ತಂದು ಬಿಸಾಡಿದ್ದಾರೊ ಎಂದು ತಿಳಿದು ಬಂದಿಲ್ಲ.

ಗ್ರಾಮ ಪಂಚಾಯ್ತಿಯವರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಸತ್ಯಾಸತ್ಯತೆ ತಿಳಿದು ಮೃತದೇಹದ ವಿಲೇವಾರಿ ಮಾಡಬೇಕಿದೆ.

ವಿಸ್ಮಯ ನ್ಯೂಸ್ ಯೋಗೀಶ್ ಮಡಿವಾಳ ಕುಮಟಾ

Related Articles

Back to top button