ಕುಮಟಾ: ಹಿಂದೂಗಳ ಪವಿತ್ರ ಹಬ್ಬ ಗಣೇಶ ಚತುರ್ಥಿಗೆ ದಿನಗಣನೆ ಪ್ರಾರಂಭವಾಗಿದ್ದು, ಗಣೇಶ ಚತುರ್ಥಿಯ ( Ganesh Chaturthi) ಸಿದ್ಧತೆ ಎಲ್ಲೆಡೆ ಜೋರಾಗಿದೆ. ಒಂಡೆಡೇ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಅದ್ದೂರಿ ಮಟ್ಟಪ ಮುಂತಾದವುಗಳು ತಯಾರಿಯಲ್ಲಿ ತೊಡಗಿದ್ದರೇ, ಇನ್ನೊಂದೆಡೆ ಸಕಲ ಪೂಜೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ಗಣಪನ್ನು ಸಿದ್ಧಗೊಳ್ಳುತ್ತಿದ್ದಾರೆ. ಹೌದು, ಎಲ್ಲಡೆ ಗಣೇಶ ಮೂರ್ತಿಯ ತಯಾರಿ ಕಾರ್ಯ ಭರದಿಂದ ಸಾಗಿದ್ದು, ಅದೇ ರೀತಿ ಕುಮಟಾ ಪಟ್ಟಣದಲ್ಲಿಯೂ ಕೂಡ ವಿಘ್ನನಾಶಕನ ಮೂರ್ತಿ ತಯಾರಿ ಕಾರ್ಯ ಜೋರಾಗೆ ನಡೆಯುತ್ತಿದೆ.
ಕುಮಟಾ ಪಟ್ಟಣದ ಗುಡಗಾರಗಲ್ಲಿ, ದೇವರಹಕ್ಕಲ ಮುಂತಾದ ಭಾಗದಲ್ಲಿ ಗಣೇಶನ ಮೂರ್ತಿ ( ganesha idol) ತಯಾರಿಸುತ್ತಿರುವ ದೃಷ್ಯ ಕಂಡುಬoದಿದ್ದು, ಕೆಲವೆಡೆ ಮೂರ್ತಿ ತಯಾರಿಯು ಪೂರ್ಣಗೊಂಡಿದ್ದು, ಬಣ್ಣ ಬಡಿಯುವ ಕೆಲಸ ಪ್ರಾರಂಭಗೊoಡಿದ್ದೆ. ಇನ್ನು ಕೆಲವೆಡೆ ಬಣ್ಣ ಬಡಿಯುವ ಕೆಲಸ ಕೂಡ ಮುಕ್ತಾಯಗೊಳ್ಳುತ್ತಾ ಬಂದಿದೆ. ಪಿ.ಒ.ಪಿ ಮುಂತಾದವುಗಳ ಕಾಲಮಾನದಲ್ಲಿಯೂ ಕೂಡ ಕುಮಟಾದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಅನಾದಿಕಾಲದಿಂದ ಮಾಡಿಕೊಂಡು ಬಂದಿರುವುದು ಸಂತಸದ ವಿಷಯವಾಗಿದೆ.
ತಮ್ಮ ಪೂರ್ವಜರಿಂದ ಬಂದ ಕಲೆಯನ್ನು ಇಂದಿಗೂ ಸಹ ಉಳಿಸಿಕೊಂಡು, ಅದನ್ನು ಮುಂದುವರೆಸಿಕೊoಡು ಬಂದಿದ್ದಾರೆ ಕುಮಟಾದ ಗಣೇಶ ಮೂರ್ತಿ ತಯಾರಕರು. ಜೇಡಿ ಮಣ್ಣಿನ ಲಭ್ಯತೆಯ ಕೊರತೆ, ಮಣ್ಣನ್ನು ಹದಮಾಡಲು ಕಾರ್ಮಿಕರ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳ ನಡುವೆಯೂ ಅನಾದಿಕಾಲದ ಕಲೆಯನ್ನು ಬಿಡದೆ, ಹಣಕ್ಕಾಗಿ ಆಸೆ ಪಡೆದೆ ತಮ್ಮ ಕಾರ್ಯವನ್ನು ಮಾಡಿಕೊಂಡುಬoದಿದ್ದಾರೆ. ಗಣೇಶ ಮೂರ್ತಿ ತಯಾರಿಕೆಯೂ ಎಲ್ಲರಿಗೂ ಒಲಿಯದ ವಿದ್ಯೇಯಾಗಿದ್ದು, ಜೊತೆಗೆ ಇದು ಅತಿ ಲಾಭದಾಯಕ ವೃತ್ತಿಯು ಸಹ ಅಲ್ಲವಾಗಿದೆ. ದೇವರ ಕಾರ್ಯ, ಕಲೆಯ ಉಳಿಸುವಿಕೆ, ಮೂರ್ತಿ ತಯಾರಿಕೆ ಎಂಬುದು ವಿಶೇಷ ಹವ್ಯಾಸ ಎಂಬಿತ್ಯಾದಿ ಕಾರಣಗಳಿಂದ ಇಂದಿಗೂ ಈ ವೃತ್ತಿಯನ್ನು ಮುಂದುವರೆಸಿಕೊoಡು ಬಂದಿದ್ದಾರೆ.
ಈ ಸಂಬoಧ ದೇವರಹಕ್ಕಲದ ಗಣೇಶ ಮೂರ್ತಿ ತಯಾರಕರಾದ ರಾಜು ಭಂಡಾರಿ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ನಮ್ಮ ತಾತನವರ ಕಾಲದಿಂದಲೂ ಗಣೇಶ ಮೂರ್ತಿಯನ್ನು ತಯಾರಿಸಿಕೊಂಡು ಬಂದಿದ್ದು, ಅವರ ಮಾರ್ಗದರ್ಶನದಲ್ಲಿಯೇ ನಾವು ಸಹ ಮೂರ್ತಿ ತಯಾರಿಕೆಯನ್ನು ಕಲಿತಿದ್ದೆವೆ. ಮೊದಲೆಲ್ಲ ಜೆಡಿ ಮಣ್ಣು ನಮಗೆ ಸಮೀಪವಾದ ವಾಲಗಳ್ಳಿಯಲ್ಲಿಯೇ ದೊರಕುತ್ತಿತ್ತು. ಆದರೆ ಇದೀಗ ದೂರದ ಬನವಾಸಿ ಮುಂತಾದ ಭಾಗದಿಂದ ಮಣ್ಣನ್ನು ತರಬೇಕಾದ ಸ್ಥಿತಿಯಿದೆ ಎನ್ನುತ್ತ ವಿವರಣೆ ನೀಡಿದರು.
( Ganesh Chaturthi) ಈ ಕುರಿತು ಗಣೇಶ ಮೂರ್ತಿ ತಯಾರಕರಾದ ವೆಂಕಟರಮಣ ಗುಡಿಗಾರ ಅವರು ಮಾತನಾಡಿ, ಪೂರ್ವಜರಿಂದ ಕಲೆಯನ್ನು ನಾವು ಇಂದಿಗೂ ಉಳಿಸಿಕೊಂಡು ಬಂದಿದ್ದೆವೆ. ನಾವು ಸುಮಾರು 55 ಗಣಪತಿಗಳನ್ನು ತಯಾರಿಸುತ್ತೆವೆ. ಮೊದಲ ದಿನಗಳಿಗೆ ಹೋಲಿಸಿದರೆ ಗಣೇಶ ಮೂರ್ತಿ ತಯಾರಿಕೆಯು ಇಂದಿನ ದಿನದಲ್ಲಿ ಕಷ್ಟಕರವಾದ ಕೆಲಸ ಎಂದು ಅಭಿಪ್ರಾಯಪಟ್ಟರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ