Focus News
Trending

ಅಂಕೋಲಾದಲ್ಲಿ ಇಂದು ನಾಲ್ವರಿಗೆ ಕರೊನಾ

ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ 4 ಹೊಸ ಕೋವಿಡ್ ಕೇಸ್‍ಗಳು ದಾಖಲಾಗಿದ್ದು, ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಗುಣಮುಖರಾದ 3 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 10 ಸಕ್ರೀಯ ಪ್ರಕರಣಗಳಿವೆ. ತಾಲೂಕಿನ ಬೇಲೇಕೇರಿ, ಬೆಳಸೆ, ಹಾರವಾಡ, ಕೈರಾಮಕ್ಕಿ, ಹೊನ್ನಳ್ಳಿ ವ್ಯಾಪ್ತಿಯಲ್ಲಿ 152 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಗುಣಮುಖ 3 : ಸಕ್ರೀಯ 10
  • ಗೋವಾ ಮತ್ತು ಮಹಾರಾಷ್ಟ್ರದಿಂದ ಬಂದವರಲ್ಲಿಯೂ ಸೋಂಕು
  • ಮತ್ತೆರಡು ಐ.ಎಲ್.ಐ ಪ್ರಕರಣ

ಇಂದು ಕಾಣಿಸಿಕೊಂಡ 4 ಪ್ರಕರಣಗಳಲ್ಲಿ 2 ಪ್ರಕರಣಗಳು ಹೊರರಾಜ್ಯದಿಂದ ಬಂದವರಲ್ಲಿ ಧೃಡಪಟ್ಟಿದೆ. ಗೋವಾ ರಾಜ್ಯದಿಂದ ಕೆಲ ದಿನಗಳ ಹಿಂದಷ್ಟೇ ಬಂದು, ಪಟ್ಟಣದ ಲಾಡ್ಜ್ ನಲ್ಲಿ ಕ್ವಾರಂಟೈನ್‍ನಲ್ಲಿದ್ದ ತಾಲೂಕಿನ ಯುವಕನೋರ್ವನಲ್ಲಿ ಸೋಂಕು ಧೃಡಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿದ್ದ ಮತ್ತೋರ್ವ ಯುವಕನಲ್ಲಿಯೂ ಸೋಂಕು ಧೃಡಪಟ್ಟಿದೆ. ಉಳಿದ 2 ಪ್ರಕರಣಗಳು ಜ್ವರ ಲಕ್ಷಣಗಳಿಂದ ಕೂಡಿದ(ಐ.ಎಲ್.ಐ) ಮಾದರಿ ಪಾಸಿಟಿವ್ ಎಂದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button